ನವದೆಹಲಿ: ಎಸ್‌ಬಿಐ, ಐಸಿಐಸಿಐ ಬ್ಯಾಂಕ್ಗಳು 1 ವರ್ಷದ ಸ್ಥಿರ ಠೇವಣಿ (FD-Fixed Deposit) ಇಡುವ ಹಿರಿಯ ನಾಗರಿಕರಿಗೆ ಶೇ. 6ಕ್ಕಿಂತ ಹೆಚ್ಚು ಬಡ್ಡಿ ಪಾವತಿಸುವುದಾಗಿ ಘೋಷಿಸಿವೆ.
ಐಸಿಐಸಿಐ ಬ್ಯಾಂಕ್: ಹಿರಿಯ ನಾಗರಿಕರಿಗೆ 1 ವರ್ಷದ ಎಫ್‌ಡಿಯಲ್ಲಿ 6.85% ಬಡ್ಡಿ ನೀಡಲು ಐಸಿಐಸಿಐ ಬ್ಯಾಂಕ್ ಮುಂದಾಗಿದೆ.
ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ 2 ಕೋಟಿ ರೂ.ಗಳವರೆಗೆ ಸ್ಥಿರ ಠೇವಣಿಗಳ ಮೇಲೆ ಶೇ 4ರಿಂದ 7.10ರಷ್ಟು ಬಡ್ಡಿ ಪಾವತಿಸುತ್ತದೆ. ಚಿಲ್ಲರೆ ಅವಧಿಯ ಠೇವಣಿ ಎಂದೂ ಕರೆಯಲ್ಪಡುವ ಈ ಸ್ಥಿರ ಠೇವಣಿಗಳು ಖಾಸಗಿ ವಲಯದ ಸಾಲಗಾರರಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗಿನ ಒಟ್ಟು 16 ಮೆಚ್ಯೂರಿಟಿ ಆಯ್ಕೆಗಳಲ್ಲಿ ಲಭ್ಯವಿದೆ. ಇತರ ಗ್ರಾಹಕರಿಗೆ ಹೋಲಿಸಿದರೆ ಐಸಿಐಸಿಐ ಬ್ಯಾಂಕ್, ಹಿರಿಯ ನಾಗರಿಕ ಚಿಲ್ಲರೆ ಠೇವಣಿದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಉದಾಹರಣೆಗೆ, ಒಂದು ವರ್ಷದ 2 ಕೋಟಿ ರೂ.ಗಳವರೆಗೆ ಸ್ಥಿರ ಠೇವಣಿಯಲ್ಲಿ, ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕ ಗ್ರಾಹಕರಿಗೆ ಶೇ. 6.85 ಮತ್ತು ಇತರ ಗ್ರಾಹಕರಿಗೆ ಶೇ. 6.35ರಷ್ಟು ಬಡ್ಡಿ ಪಾವತಿಸುತ್ತದೆ ಎಂದು ಬ್ಯಾಂಕ್ ವೆಬ್‌ಸೈಟ್ - icicibank.com ತಿಳಿಸಿದೆ.
ಎಸ್‌ಬಿಐ ಬ್ಯಾಂಕ್: ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ರಿಯ ನಾಗರಿಕರಿಗೆ ಒಂದು ವರ್ಷದ ಎಫ್‌ಡಿಗಳಲ್ಲಿ 6.75% ಬಡ್ಡಿ ಪಾವತಿಸಲಿದೆ.
ಎಸ್‌ಬಿಐ ತನ್ನ ಗ್ರಾಹಕರಿಗೆ 2 ಕೋಟಿ ರೂ.ವರೆಗಿನ ಸ್ಥಿರ ಠೇವಣಿಗಳ ಮೇಲೆ ಶೇ. 4.5 ರಿಂದ 6.75ರಷ್ಟು ಬಡ್ಡಿ ಪಾವತಿಸುತ್ತದೆ. ಇದು ಚಿಲ್ಲರೆ ಎಫ್‌ಡಿಗಳಿಗಾಗಿ 8 ಮೆಚ್ಯೂರಿಟಿ ಆಯ್ಕೆಗಳನ್ನು ನೀಡುತ್ತದೆ. ಒಂದು ವರ್ಷದ 2 ಕೋಟಿ ರೂ.ಗಳವರೆಗೆ ಸ್ಥಿರ ಠೇವಣಿಯಲ್ಲಿ, ಎಸ್‌ಬಿಐ ಹಿರಿಯ ನಾಗರಿಕರಲ್ಲದ ಗ್ರಾಹಕರಿಗೆ ಶೇ. 6.25ರಷ್ಟು ಮತ್ತು ಹಿರಿಯ ನಾಗರಿಕ ಗ್ರಾಹಕರಿಗೆ ಶೇ.6.75 ರಷ್ಟು ಬಡ್ಡಿ ಪಾವತಿಸುತ್ತದೆ ಎಂದು ಎಸ್ಬಿಐನ ಕಾರ್ಪೋರೇಟ್ ವೆಬ್‌ಸೈಟ್ - sbi.co .in. ತಿಳಿಸಿದೆ.