ETV Bharat / bharat

IAVI, Merck ಸಹಯೋಗದಲ್ಲಿ ಕೋವಿಡ್​-19 ಲಸಿಕೆ ಅಭಿವೃದ್ಧಿ..

author img

By

Published : Jun 2, 2020, 4:16 PM IST

ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಾದ IAVI ಮತ್ತು Merck ಸಹಯೋಗದಲ್ಲಿ ಕೋವಿಡ್​-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಜರುಗುತ್ತಿದೆ. ಒಂದು ವೇಳೆ ಅಂಗೀಕರಿಸಲ್ಪಟ್ಟರೆ ಲಸಿಕೆಯನ್ನು ಜಾಗತಿಕವಾಗಿ, ಎಲ್ಲರ ಕೈಗೆಟುಕುವಂತೆ ಮಾಡುವುದು ಅವರ ಮುಖ್ಯ ಉದ್ದೇಶವಾಗಿದೆ.

IAVI, Merck ಸಹಯೋಗದಲ್ಲಿ ಕೋವಿಡ್​-19 ಲಸಿಕೆ ಅಭಿವೃದ್ಧಿ

ಹೈದರಾಬಾದ್ : ಚೀನಾದ ವುಹಾನ್ ಪ್ರಾಂತ್ಯದಿಂದ ಹುಟ್ಟಿಕೊಂಡಿದೆ ಎಂದು ಹೇಳಲಾದ ರಕ್ಕಸಿ ಕೊರೊನಾ ವೈರಸ್‌ನ ತಡೆಗಟ್ಟಲು ಎಂಎಸ್​ಡಿ ಎಂದು ಜನಪ್ರಿಯವಾಗಿರುವ ಮೆರ್ಕ್ (ಎನ್​ವೈಎಸ್ಇ: ಎಮ್ಆರ್​ಕೆ) ಜೊತೆಗೆ ಲಾಭರಹಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಐಎವಿಐ ತನಿಖಾ ಲಸಿಕೆ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ.

SARS-CoV-2 ಲಸಿಕೆಯ ಅಭಿವೃದ್ಧಿ ಮತ್ತು ಜಾಗತಿಕ ಕ್ಲಿನಿಕಲ್ ಮೌಲ್ಯಮಾಪನವನ್ನು ಮುನ್ನಡೆಸಲು ಎರಡೂ ಸಂಸ್ಥೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಅಂಗೀಕರಿಸಲ್ಪಟ್ಟರೆ ಲಸಿಕೆಯನ್ನು ಜಾಗತಿಕವಾಗಿ, ಎಲ್ಲರ ಕೈಗೆಟುಕುವಂತೆ ಮಾಡುವುದು ಅವರ ಮುಖ್ಯ ಉದ್ದೇಶವಾಗಿದೆ.

ಈ ಲಸಿಕೆ ತಯಾರಿಕೆಗೆ ರಿಕಾಂಬಿನಂಟ್​ ವೆಸಿಕ್ಯುಲರ್ ಸ್ಟೊಮಾಟಿಟಿಸ್ ವೈರಸ್ (ಆರ್​ವಿಎಸ್​ವಿ) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಮಾನವರ ಬಳಕೆಗೆ ಅನುಮೋದಿಸಲಾದ ಮೊದಲ ಆರ್‌ವಿಎಸ್‌ವಿ ಲಸಿಕೆಯಾಗಿದೆ.

ಮೆರ್ಕ್ ರಿಸರ್ಚ್ ಲ್ಯಾಬೊರೇಟರೀಸ್​ ಅಧ್ಯಕ್ಷ ಡಾ. ರೋಜರ್ ಎಂ ಪರ್ಲ್ಮುಟರ್, ಕೋವಿಡ್​-19 ವೈಜ್ಞಾನಿಕ, ವೈದ್ಯಕೀಯ ಮತ್ತು ಜಾಗತಿಕ ಆರೋಗ್ಯ ವಲಯಕ್ಕೆ ಒಂದು ದೊಡ್ಡ ಸವಾಲು. ಕೊರೊನಾ ನಿವಾರಿಸುವ ಗುರಿ ಹೊಂದಿರುವ ಸೋಂಕು ನಿರೋಧಕ ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮೆರ್ಕ್ ಜಗತ್ತಿನಾದ್ಯಂತ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಪಥವನ್ನು ಮೊಂಡಾಗಿಸುವ ಗುರಿಯೊಂದಿಗೆ, ಆರ್​ವಿಎಸ್​ವಿ ಲಸಿಕೆ ಅಭ್ಯರ್ಥಿಯ ಅಭಿವೃದ್ಧಿಯನ್ನು ವೇಗಗೊಳಿಸಲು ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸಲು ಮೆರ್ಕ್ ಮತ್ತು ಐಎವಿಐ ಉತ್ಸುಕರಾಗಿದ್ದಾರೆ ಎಂದರು.

ಐಎವಿಐ ಅಧ್ಯಕ್ಷ ಮತ್ತು ಸಿಇಒ ಡಾ. ಮಾರ್ಕ್ ಫೀನ್ಬರ್ಗ್, ಆರ್​ವಿಎಸ್​ವಿ ಆಧಾರಿತ ಲಸಿಕೆ ತಂತ್ರವು ನೋವೆಲ್​​ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎದುರಿಸುವ ಭರವಸೆಯ ವಿಧಾನವನ್ನು ಪ್ರತಿನಿಧಿಸುತ್ತದೆ. ನಮ್ಮ ಲಸಿಕೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮೆರ್ಕ್ ಜೊತೆಗೆ ವೇಗವರ್ಧಿತ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತರಲು ಎದುರು ನೋಡುತ್ತೇವೆ. ಈ ಕಷ್ಟಕರ ಜಾಗತಿಕ ಆರೋಗ್ಯ ಸವಾಲನ್ನು ಎದುರಿಸಲು ನಮ್ಮ ಜಂಟಿ ಸಾಮರ್ಥ್ಯಗಳನ್ನು ಪೂರಕ ಮತ್ತು ಸಿನರ್ಜಿಸ್ಟಿಕ್ ರೀತಿ ಬಳಸಿಕೊಳ್ಳಲು ಮೆರ್ಕ್ ಮತ್ತು ಐಎವಿಐ ನಡುವಿನ ಸಹಯೋಗವು ಒಂದು ನವೀನ ಪಾಲುದಾರಿಕೆ ಮಾದರಿ ಮತ್ತು ವಿಧಾನವನ್ನು ಪ್ರತಿನಿಧಿಸುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.