ETV Bharat / bharat

ಕೊರೊನಾ ಹಾಟ್​​ಸ್ಪಾಟ್​ ಆಗಿದ್ದ ಧಾರವಿ ಸ್ಲಮ್ ಜಗತ್ತಿಗೆ ಮಾದರಿಯಾಗಿದ್ದು ಹೇಗೆ ಗೊತ್ತಾ..?

ಏಷ್ಯಾದ ಅತೀ ದೊಡ್ಡ ಕೊಳಗೇರಿಯಾಗಿರುವ ಮುಂಬೈನ ಧಾರವಿಯನ್ನು ಎರಡು ತಿಂಗಳ ಮುಂಚೆ ಕೊರೊನಾ ಹಾಟ್​ಸ್ಪಾಟ್​ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಧಾರವಿ ಸೋಂಕು ನಿಯಂತ್ರಿಸುವಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಮಾದರಿಯಾಗಿದೆ.

author img

By

Published : Jun 18, 2020, 2:58 PM IST

How Dharavi, Asia's biggest slum went from coronavirus hotspot to model ?
ಧಾರವಿ ಸ್ಲಮ್ ಜಗತ್ತಿಗೆ ಮಾದರಿಯಾಗಿದ್ದು ಹೇಗೆ ಗೊತ್ತಾ..?

ಮುಂಬೈ : ಸುಮಾರು ಏಳು ಲಕ್ಷ ಜನ ಸಂಖ್ಯೆಯೊಂದಿಗೆ ಏಷ್ಯಾದ ಅತಿದೊಡ್ಡ ಕೊಳೆಗೇರಿ ಎಂದು ಕರೆಯಲ್ಪಡುವ ಧಾರವಿಯಲ್ಲಿ ಎರಡು ತಿಂಗಳ ಮೊದಲ ಕೋವಿಡ್​ ಪ್ರಕರಣ ವರದಿಯಾದಾಗ ಈ ಪ್ರದೇಶವು ಜನ ನಿಬಿಡವಾಗಿರುವುದರಿಂದ ನಗರದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಕೋವಿಡ್​ ಹಾಟ್​ಸ್ಪಾಟ್​ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದರು.

ಆದರೆ, ಧಾರವಿ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿದ್ದು, ಅತೀ ಕಡಿಮೆ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ತಡೆಯಲು ಹೆಣಗಾಡುತ್ತಿರುವ ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಪ್ರೇರಣೆಯಾಗಿದೆ. ಧಾರವಿಯಲ್ಲಿ ಕೊರೊನಾ ತಡೆಗಟ್ಟುವುದು ಅಸಾಧ್ಯ ಎಂದು ತೋರುತ್ತಿದ್ದ ಸಮಯದಲ್ಲಿ ಮುಂಬೈ ಮಹಾನಗರ ಪಾಲಿಕೆ' ಚೇಸ್​ ದಿ ವೈರಸ್'​ ಎಂಬ ಅಭಿಯಾನವನ್ನು ಪ್ರಾರಂಭಿಸಿ ಸೋಂಕು ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾಗಿದೆ. 'ಮಿಷನ್ ಧಾರವಿ' ಅಭಿಯಾನ ಪ್ರಾರಂಭವಾದ ಬಳಿಕ ಫಲಿತಾಂಶ ಬರಲು ಪ್ರಾರಂಭವಾಗಿದ್ದು, ಕಳೆದ ವಾರ 10 ರಿಂದ 15 ಇದ್ದ ಪ್ರಕರಣಗಳು ಈಗ 100 ರಿಂದ 150 ರಷ್ಟು ಏರಿಕೆಯಾಗಿವೆ.

How Dharavi, Asia's biggest slum went from coronavirus hotspot to model ?
ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ

ಜನ ನಿಬಿಡ ಪ್ರದೇಶವಾಗಿರುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ನಾವು ಕೋವಿಡ್​ ಪರೀಕ್ಷೆಯನ್ನು ಹೆಚ್ಚಿಸಿದ್ದೇವೆ ಮತ್ತು ಕಟ್ಟುನಿಟ್ಟಾದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಉತ್ತರ ವಿಭಾಗದ ಸಹಾಯಕ ಆಯುಕ್ತ ಕಿರಣ್ ದಿಘವ್ಕರ್ ಹೇಳಿದ್ದಾರೆ.

ಮಹಾನಗರದ ಪಾಲಿಕೆಯ ತಂಡ ಲಕ್ಷಾಂತರ ಜನರ ಮನೆ - ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದೆ. ಎರಡು ಕಿ.ಮೀ ಗಿಂತಲೂ ಹೆಚ್ಚು ಪ್ರದೇಶದಲ್ಲಿ ಸ್ಯಾನಿಟೈಸರ್​ ಸಿಂಪಡನೆ ಮಾಡಲಾಗಿದೆ. ಪರಿಣಾಮಕಾರಿ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಮಿಷನ್ ಧಾರವಿ ಯಶಸ್ವಿಯಾಗುತ್ತಿದೆ ಎಂದು ದಿಘವ್ಕರ್ ತಿಳಿಸಿದ್ದಾರೆ. ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಲು ಮತ್ತು ಮಿಷನ್ ಧಾರವಿ ಯಶಸ್ವಿಯಾಗಲು 200 ವೈದ್ಯರು, 300 ದಾದಿಯರು, 40 ಇಂಜಿನಿಯರ್‌ಗಳು, 300 ಸಿಬ್ಬಂದಿಗಳು ಮತ್ತು 3,600 ಕಾರ್ಮಿಕರ ವಿಶೇಷ ತಂಡವು ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುತ್ತಿದೆ. ನಗರ ಪಾಲಿಕೆಯ ತಂಡ ಶಂಕಿತರ ಮನೆ-ಮನೆಗೆ ತೆರಳಿ ತಪಾಸಣೆ ನಡೆಸುತ್ತಿದೆ. ಪಾಸಿಟಿವ್ ಕಂಡು ಬಂದಲ್ಲಿ ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಐಸೋಲೇಟ್ ಮಾಡಲಾಗುತ್ತಿದೆ.​ ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕಂಟೇನ್​ಮೆಂಟ್ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಸೋಂಕಿತರ ಚಿಕಿತ್ಸೆಗಾಗಿ ಸಿದ್ದಗೊಂಡಿರುವ ಹಾಸಿಗೆಗಳು

ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಆಹಾರದ ಪ್ಯಾಕೆಟ್‌ ಮತ್ತು 20 ಸಾವಿರದಷ್ಟು ದಿನಸಿ ಸಾಮಗ್ರಿಗಳ ಪ್ಯಾಕೆಟ್ ವಿತರಿಸಲಾಗಿದೆ. ಆರಂಭದಲ್ಲಿ ಸೋಂಕಿತರ ಪ್ರಮಾಣ 13 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿತ್ತು. ಕ್ರಮೇಣ ಅದು 16 ಮತ್ತು ನಂತರ 20 ದಿನಗಳವರೆಗೆ ಮುಂದುವರಿಯಿತು. ಈಗ 32 ದಿನಗಳಿಗೆ ತಲುಪಿದೆ. ಒಟ್ಟಾರೆ, ಧಾರವಿಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಕಿರಣ್ ದಿಘವ್ಕರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.