ETV Bharat / bharat

ಹೈದರಾಬಾದ್ ಸುಧಾರಿಸಲು ಲಾಕ್ ಡೌನ್ ಅವಧಿಯ ಬಳಕೆ..

author img

By

Published : May 3, 2020, 12:08 AM IST

ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮತ್ತು ಜನರು ಮನೆಯೊಳಗೆ ಉಳಿದುಕೊಂಡಿರುವುದರಿಂದ, ಹೈದರಾಬಾದ್‌ನ ಅಧಿಕಾರಿಗಳು ಹೊಸ ರಸ್ತೆಗಳನ್ನು ಹಾಕಲು, ಫ್ಲೈಓವರ್‌ಗಳನ್ನು ನಿರ್ಮಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ.

Govt uses lockdown to improve Hyderabad
ಹೈದರಾಬಾದ್ ಅನ್ನು ಸುಧಾರಿಸಲು ಲಾಕ್ ಡೌನ್ ಬಳಕೆ

ಹೈದರಾಬಾದ್: ಲಾಕ್‌ಡೌನ್ ಅವಧಿಯಲ್ಲಿ ಅಧಿಕಾರಿಗಳು ಹೊಸ ರಸ್ತೆಗಳನ್ನು, ಫ್ಲೈಓವರ್‌ಗಳನ್ನು ನಿರ್ಮಿಸಿದ್ದು ಹಾಗೂ ಟ್ರಾಫಿಕ್ ಜಂಕ್ಷನ್‌ಗಳನ್ನು ಸೌಂದರ್ಯೀಕರಣ ಮಾಡಿದ್ದರಿಂದ ಹೈದರಾಬಾದ್ ರೂಪಾಂತರಕ್ಕೆ ಒಳಗಾಗಿದೆ.

ಮಾ.23 ರಂದು ಪ್ರಾರಂಭವಾದ ಲಾಕ್‌ಡೌನ್ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ವರದಾನವಾಗಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಮತ್ತು ಇತರ ಏಜೆನ್ಸಿಗಳು ಹೊಸ ರಸ್ತೆಗಳನ್ನು ನಿರ್ಮಿಸುತ್ತಿವೆ. ಅಲ್ಲದೇ ಫ್ಲೈ ಓವರ್‌ಗಳ ನಿರ್ಮಾಣವನ್ನು ವೇಗಗೊಳಿಸುತ್ತಿವೆ. ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಮುನ್ಸಿಪಲ್ ಅಡ್ಮಿನಿಸ್ಟ್ರೇಟರ್ ಕೆ.ಟಿ. ರಾಮರಾವ್ ಅವರು, ಜಿಎಚ್‌ಎಂಸಿ ಮತ್ತು ಇತರರಿಗೆ ಅವಕಾಶವನ್ನು ಬಳಸಿಕೊಂಡು ಬಾಕಿ ಇರುವ ಕೆಲಸಗಳನ್ನು ತ್ವರಿತವಾಗಿ ಮುಗಿಸಲು ತಿಳಿಸಿದ್ದಾರೆ.

ಈ ಮದ್ಯೆ ಮುನ್ಸಿಪಲ್ ಅಡ್ಮಿನಿಸ್ಟ್ರೇಟರ್ ಕೆ.ಟಿ. ರಾಮರಾವ್ ಅವರು ಇಂದು ಹೈದರಾಬಾದ್ ಮೇಯರ್ ಬೊಂಟು ರಾಮಮೋಹನ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ಪರಿಶೀಲಿಸಿದರು. ಮುಂದಿನ ತಿಂಗಳು ಮಳೆ ಬೀಳಲು ಪ್ರಾರಂಭವಾಗುವುದರಿಂದ, ಈ ತಿಂಗಳು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹೈದರಾಬಾದ್ ಅನ್ನು ಟ್ರಾಫಿಕ್ ಜಾಮ್ ಮುಕ್ತ ನಗರವೆಂದು ಸರ್ಕಾರ ತಿರ್ಮಾನಿಸಿದ್ದು, ಭೂಸ್ವಾಧೀನ ಮಾಡುವ ಮೂಲಕ ಲಿಂಕ್ ರಸ್ತೆಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.