ETV Bharat / bharat

ಮಹದಾಯಿಗೆ ಮತ್ತೆ ಗೋವಾ ಕ್ಯಾತೆ: ಸಿಎಂ ಪ್ರಮೋದ್ ಸಾವಂತ್ ಸ್ಫೋಟಕ ಹೇಳಿಕೆ - ಗೋವಾ

ಕಳಸಾ- ಬಂಡೂರಿ ನಾಲೆಯ ಮೂಲಕ ನೀರು ಪಡೆಯಲು ಕರ್ನಾಟಕಕ್ಕೆ ಯಾವುದೇ ರೀತಿಯ ಅನುಮತಿ ನೀಡದಂತೆ ತಡೆಯಾಜ್ಞೆ ಕೋರಿ ನಾಲ್ಕು ದಿನಗಳ ಒಳಗೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವುದಾಗಿ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.

Mahadayi river water
ಮಹದಾಯಿ
author img

By

Published : Feb 22, 2020, 4:15 AM IST

ಪಣಜಿ: ಮಹದಾಯಿ ನದಿ ನೀರು ಪಡೆಯುವ ಕರ್ನಾಟಕಕ್ಕೆ ನ್ಯಾಯಾಧಿಕರಣ ಕೆಲ ದಿನಗಳ ಹಿಂದೆಯಷ್ಟೇ ಸಿಹಿ ಸುದ್ದಿ ನೀಡಿದ್ದ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕಳಸಾ- ಬಂಡೂರಿ ನಾಲೆಯ ಮೂಲಕ ನೀರು ಪಡೆಯಲು ಕರ್ನಾಟಕಕ್ಕೆ ಯಾವುದೇ ರೀತಿಯ ಅನುಮತಿ ನೀಡದಂತೆ ತಡೆಯಾಜ್ಞೆ ಕೋರಿ ನಾಲ್ಕು ದಿನಗಳ ಒಳಗೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವುದಾಗಿ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

ನ್ಯಾಯ ಮಂಡಳಿಯು ಅಧಿಸೂಚನೆ ಹೊರಡಿಸುವುದರಿಂದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಅಂತ್ಯವಾಗುವುದಿಲ್ಲ ಎಂದು ಉಚ್ಚರಿಸಿದ್ದಾರೆ.

ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ರಾಜ್ಯದ ಪಾಲಿನ 14.2 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದಂತಾಗಿದೆ. ಆದರೆ, ಈಗ ಮತ್ತೆ ಈ ಬಗ್ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.