ಹೈದರಾಬಾದ್: ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಲಾಗುವ 'ಜಾಗತಿಕ ಕೈತೊಳೆಯುವ ದಿನ' (Global Handwashing Day), ಕೊರೊನಾದಿಂದಾಗಿ ಈ ಬಾರಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಭೂಮಂಡಲದಲ್ಲಿ ಬರೋಬ್ಬರಿ 3,87,52,973 ಜನರು ಕೋವಿಡ್ ಸುಳಿಯಲ್ಲಿ ಸಿಲುಕಿದ್ದು, 10,96,962 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 2,91,29,637 ಮಂದಿ ಗುಣಮುಖರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಯಾನಿಟೈಸರ್ ಬಳಸುವುದು, ಸಾಬೂನುಗಳನ್ನು ಬಳಸಿ ಕೈತೊಳೆಯುವುದು ಸೇರಿದಂತೆ ನೈರ್ಮಲ್ಯ, ಸ್ವಚ್ಛತೆಯ ಬಗ್ಗೆ ಕೋವಿಡ್ ನಮಗೆ ಪಾಠ ಕಲಿಸಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ.
-
Hands can carry virus. Let’s raise awareness about the importance of hand-hygiene and encourage our family and friends to follow frequent hand-washing as a precautionary measure to stay safe and healthy.
— Ministry of Health (@MoHFW_INDIA) October 15, 2020 " class="align-text-top noRightClick twitterSection" data="
#SwasthaBharat #HealthForAll #GlobalHandwashingDay pic.twitter.com/Wa3MQNtei0
">Hands can carry virus. Let’s raise awareness about the importance of hand-hygiene and encourage our family and friends to follow frequent hand-washing as a precautionary measure to stay safe and healthy.
— Ministry of Health (@MoHFW_INDIA) October 15, 2020
#SwasthaBharat #HealthForAll #GlobalHandwashingDay pic.twitter.com/Wa3MQNtei0Hands can carry virus. Let’s raise awareness about the importance of hand-hygiene and encourage our family and friends to follow frequent hand-washing as a precautionary measure to stay safe and healthy.
— Ministry of Health (@MoHFW_INDIA) October 15, 2020
#SwasthaBharat #HealthForAll #GlobalHandwashingDay pic.twitter.com/Wa3MQNtei0
ಹೆಚ್ಚಿನ ಪ್ರಮಾಣದಲ್ಲಿ ವೈರಾಣುಗಳು ಕೈಗಳಿಂದ ಹರಡುತ್ತದೆ. ಕೈನಿಂದ ನೇರವಾಗಿ ಬಾಯಿಗೆ ಸೋಂಕು ತಗುಲುತ್ತದೆ. ಕೈ-ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸೋಣ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ಮುನ್ನೆಚ್ಚರಿಕೆ ಕ್ರಮವಾಗಿ ಆಗಾಗ ಕೈ ತೊಳೆಯುವ ಸುಲಭ ಕ್ರಮವನ್ನು ಅನುಸರಿಸುವಂತೆ ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಪ್ರೋತ್ಸಾಹಿಸೋಣ ಎಂದು ಭಾರತದ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಗ್ಲೋಬಲ್ ಹ್ಯಾಂಡ್ ವಾಷಿಂಗ್ ಡೇ ಹಿನ್ನೆಲೆ ಟ್ವೀಟ್ ಮಾಡಿದೆ.
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 81,50,043 ಇದ್ದು, ಮೃತರ ಸಂಖ್ಯೆ 2,21,843ಕ್ಕೆ ಏರಿಕೆಯಾಗಿದೆ. ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 73,07,097 ಕೇಸ್ಗಳು ಪತ್ತೆಯಾಗಿದ್ದು, 1,11,311 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 51,41,498 ಪ್ರಕರಣಗಳು ಹಾಗೂ 1,51,779 ಸಾವುಗಳು ವರದಿಯಾಗಿದೆ.
4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 13,40,409 ಕೇಸ್ಗಳಿದ್ದು, 23,205 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 85,622 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.