ಹೈದರಾಬಾದ್: ಔಷಧ ಸಂಶೋಧಕರ ತಂಡದ ನೇತೃತ್ವದಲ್ಲಿ ನಡೆದ ಗಿಲಿಯಡ್ ಸೈನ್ಸಸ್ ಇನ್‌ಕಾರ್ಪೊರೇಟೆಡ್ ಸಂಸ್ಥೆಯ ರೆಮ್ದೆಸಿವರ್‌ನ ಚಿಕಿತ್ಸಕ ಪ್ರಯೋಗಗಳಲ್ಲಿ, ಈ ಔಷಧಿಯು ಕೋವಿಡ್-19 ರೋಗಿಗಳ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಿರುವುದ ಕಂಡುಬಂದಿದೆ. ಮುಖ್ಯವಾಗಿ, ಹೆಚ್ಚುವರಿ ಆಮ್ಲಜನಕದ ಅವಶ್ಯಕತೆ ಇರುವ, ಆದರೆ, ವೆಂಟಿಲೇಟರ್‌ಗಳ ಮೇಲೆ ಅವಲಂಬಿತರಲ್ಲದವರ ಮೇಲೆ ಇದರ ಪರಿಣಾಮ ಉತ್ತಮವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್ - ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್) ಶುಕ್ರವಾರ ಹೇಳಿದೆ.
ತಜ್ಞ ವಿಮರ್ಶಿತ ದತ್ತಾಂಶದ ವಿವರಗಳು ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ - ಫೂಡ್ ಅಂಡ್ ಡ್ರಗ್ ಅಡ್ಮಿನಿಷ್ಟ್ರೇಶನ್) ತುರ್ತು ಒಪ್ಪಿಗೆ ಪಡೆದುಕೊಂಡಿದ್ದ ಪರೀಕ್ಷಾರ್ಥ ಔಷಧಿ ರೆಮ್ದೆಸಿವರ್ ಬಳಕೆಯಿಂದ ಕೋವಿಡ್-19 ಸೋಂಕಿತ ರೋಗಿಗಳು ಗುಣಮುಖರಾಗುವ ಅವಧಿ ನಾಲ್ಕು ದಿನ ಕಡಿಮೆಯಾಗಿದೆ. ಗುಣರಹಿತ ಔಷಧಿಯನ್ನು ಪಡೆದುಕೊಂಡವರು ಮನೆಗೆ ಹಿಂದಿರುಗಿದ ಹದಿನೈದು ದಿನಗಳ ಅವಧಿಗೆ ಹೋಲಿಸಿದರೆ, ರೆಮ್ದೆಸಿವರ್ ಪಡೆದುಕೊಂಡವರು ಕೇವಲ ಹನ್ನೊಂದು ದಿನಗಳಲ್ಲಿ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.
ರೋಗಿಗಳ ಪ್ರತಿದಿನದ ಗುಣಮುಖ ಹಂತವನ್ನು ಅಳೆಯುವ ಉದ್ದೇಶದಿಂದ ಪೂರ್ಣಪ್ರಮಾಣದ ಗುಣಮುಖತೆಯಿಂದ ಹಿಡಿದು ಸಾವಿನವರೆಗೆ ಇರುವ ಎಂಟು ಅಂಶಗಳ ಅನುಕ್ರಮಣ ಅಳತೆಗೋಲನ್ನು ಇರಿಸಿಕೊಳ್ಳಲಾಗಿದೆ. ಹದಿನೈದನೇ ದಿನ, ಗುಣರಹಿತ ಔಷಧಿ ನೀಡಲ್ಪಟ್ಟ ಹಾಗೂ ರೆಮ್ದೆಸಿವರ್ ಪಡೆದುಕೊಂಡ ಎರಡೂ ರೀತಿಯ ರೋಗಿಗಳ ಚಿಕಿತ್ಸಕ ಪ್ರಯೋಗಗಳನ್ನು ಹೋಲಿಸಿದಾಗ, ಎರಡನೇ ವಿಭಾಗದ ರೋಗಿಗಳು ಹೆಚ್ಚು ಆರೋಗ್ಯಕರವಾಗಿದ್ದು ಫಲಿತಾಂಶಗಳಲ್ಲಿ ಕಂಡುಬಂದಿದೆ. ಹತ್ತು ದೇಶಗಳ 1063 ರೋಗಿಗಳ ಮೇಲೆ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಿದ್ದ ಅಧ್ಯಯನದ ಪ್ರಕಾರ, ಸದರಿ ಔಷಧಿಯ ಚಿಕಿತ್ಸೆ ಪಡೆದುಕೊಂಡ ಕೋವಿಡ್-19 ರೋಗಿಗಳು ಪೂರ್ಣ ಪ್ರಮಾಣದ ಸ್ಥಿರತೆ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎನ್ನುತ್ತದೆ ವರದಿ.
ರೆಮ್ದೆಸಿವರ್ ಔಷಧಿ ಬಳಕೆಯಿಂದಾಗಿ ಬದುಕುಳಿಯುವ ಪ್ರಮಾಣ ಶೇಕಡಾ 7.1ರಷ್ಟು ಹೆಚ್ಚಾಗಿದ್ದರೆ, ಗುಣವಿಲ್ಲದ ಔಷಧಿಯನ್ನು ಪಡೆದುಕೊಂಡಿದ್ದ ಹಾಗೂ ಎರಡೇ ವಾರಗಳಲ್ಲಿ ಮೃತಪಟ್ಟ ರೋಗಿಗಳ ಪ್ರಮಾಣ ಶೇಕಡಾ 11.9 ಆಗಿತ್ತು. ಅದಾಗ್ಯೂ, ರೆಮ್ದೆಸಿವರ್ ಔಷಧಿ ಬಳಕೆಯ ನಂತರವೂ ಸಾವಿನ ಪ್ರಮಾಣ ಅಧಿಕವಾಗಿಯೇ ಇರುವುದನ್ನು ಗುರುತಿಸಿರುವ ಅಧ್ಯಯನ ವರದಿಯು, ಕೋವಿಡ್-19 ರೋಗಿಗಳ ಚಿಕಿತ್ಸಕ ಫಲಿತಾಂಶ ಸುಧಾರಣೆಯು ಮುಂದುವರಿಯಬೇಕೆಂದರೆ, ಇತರ ಔಷಧೀಯ ಗುಣವುಳ್ಳ ವಸ್ತುಗಳ ಜೊತೆಗೆ ವೈರಸ್ ಪ್ರತಿವಸ್ತುಗಳ ಮೌಲ್ಯಮಾಪನವೂ ನಡೆಯಬೇಕಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದೆ.
ರೆಮ್ದೆಸಿವರ್ ಔಷಧಿಯ ಚಿಕಿತ್ಸಕ ಪ್ರಯೋಗಗಳನ್ನು ಅಲಜಿ ಹಾಗೂ ಸೋಂಕು ರೋಗಗಳ ರಾಷ್ಟ್ರೀಯ ಸಂಸ್ಥೆಯು (ಎನ್‌ಐಎಐಡಿ - ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಲೆರ್ಜಿ ಅಂಡ್‌ಇನ್‌ಫೆಕ್ಷಿಯಸ್ ಡಿಸೀಜಿಸ್) 2020ರ ಮೇ 8ರಂದು ಪ್ರಾರಂಭಿಸಿತ್ತು. ಉರಿಯೂತ ಪ್ರಬಂಧಕ ಔಷಧಿಯಾದ ಬರಿಸಿಟ್‌ನಿಬ್ ಜೊತೆ ರೆಮ್ದೆಸಿವರ್ ಹಾಗೂ ರೆಮ್ದೆಸಿವರ್ ಔಷಧಿಯನ್ನು ಮಾತ್ರ ಬಳಸಿ ಚಿಕಿತ್ಸಕ ಪ್ರಯೋಗಗಳನ್ನು ನಡೆಸಲಾಗಿತ್ತು.