ಹೈದರಾಬಾದ್: ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹೈದರಾಬಾದ್ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಇದೇ ಇಂಗಳ 11ಕ್ಕೆ ಮುಂದೂಡಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳು ಗಾಲಿ ಜನಾರ್ದನ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಶ್ರೀಲಕ್ಷ್ಮಿ, ರಾಜಗೋಪಾಲ್ ನ್ಯಾಯಾಲಯಕ್ಕೆ ಹಾಜರಾದರು. ಸಿಬಿಐ ನ್ಯಾಯಾಲಯದಲ್ಲಿ ಓಎಂಸಿ ಪ್ರಕರಣ ಕುರಿತಂತೆ ವಾದ ಮಂಡಿಸಿದ್ದು, ಮುಂದಿನ ವಿಚಾರಣೆ ಇದೇ ತಿಂಗಳ 11ಕ್ಕೆ ಸಿಬಿಐ ಕೋರ್ಟ್ ಮುಂದೂಡಲಾಗಿದೆ.
ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮಗಳ ಮೇಲೆ ಸಿಬಿಐ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಗಾಲಿ ಜನಾರ್ದನ ರೆಡ್ಡಿ ಹಾಗೂ ಕೆಲ ರಾಜಕೀಯ ಮುಖಂಡರು, ಉನ್ನತಾಧಿಕಾರಿಗಳು ಜೈಲಿಗೆ ಹೋಗಿ ಬಂದಿದ್ದಾರೆ.