ETV Bharat / bharat

ಜನವರಿ15ರ ಬಳಿಕ ಚೀನಾಗೆ ಹೋದ ವಿದೇಶಿಗರಿಗೆ ಭಾರತ ಪ್ರವೇಶ ನಿರ್ಬಂಧ - ಕೊರನಾ ವೈರಸ್​

ಚೀನಾದಲ್ಲಿ ಕೊರನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ ಇಂದು 811ಕ್ಕೆ ಏರಿಕೆಯಾಗುತ್ತಿದ್ದಂತೆ ಇತ್ತ ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ, ಜ.15 ಹಾಗೂ ಆ ಬಳಿಕ ಚೀನಾಗೆ ತೆರಳಿದ ವಿದೇಶಿಗರಿಗೆ ಭಾರತ ಪ್ರವೇಶ ನಿಷೇಧಿಸಿದೆ.

Directorate General of Civil Aviation (DGCA)
ಡೈರೆಕ್ಟರೇಟ್‌ ಜನರಲ್‌ ಆಫ್‌ ಸಿವಿಲ್‌ ಏವಿಯೇಶನ್‌(ಡಿಜಿಸಿಎ)
author img

By

Published : Feb 9, 2020, 5:21 PM IST

ನವದೆಹಲಿ: 2020ರ ಜ.15 ಹಾಗೂ ಆ ಬಳಿಕ ಚೀನಾಗೆ ತೆರಳಿದ ವಿದೇಶಿಗರು ಭಾರತಕ್ಕೆ ಬರಲು ಅನುಮತಿಯಿಲ್ಲ ಎಂದು ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.

ಜ.15ರ ಬಳಿಕ ಚೀನಾಗೆ ಹೋಗಿರುವ ವಿದೇಶಿ ಪ್ರಜೆಗಳು, ಭಾರತ-ನೇಪಾಳ, ಇಂಡೋ-ಭೂತಾನ್, ಇಂಡೋ-ಬಾಂಗ್ಲಾದೇಶ ಅಥವಾ ಇಂಡೋ-ಮ್ಯಾನ್ಮಾರ್ ಭೂ ಗಡಿಗಳು ಸೇರಿದಂತೆ ಯಾವುದೇ ವಾಯು, ಜಲ ಹಾಗೂ ಭೂಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಡೈರೆಕ್ಟರೇಟ್‌ ಜನರಲ್‌ ಆಫ್‌ ಸಿವಿಲ್‌ ಏವಿಯೇಶನ್‌(ಡಿಜಿಸಿಎ) ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಚೀನಾದಲ್ಲಿ ಕೊರನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ ಇಂದು 811ಕ್ಕೆ ಏರಿಕೆಯಾಗುತ್ತಿದ್ದಂತೆ ಭಾರತ ಮುಂಜಾಗೃತ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.

ಅಲ್ಲದೇ ಶನಿವಾರ ಹಾಂಕಾಂಗ್​, ಮಕಾವೋ ಹಾಗೂ ತೈವಾನ್ ಹೊರತುಪಡಿಸಿ, ಚೀನಾದ ಪಾಸ್‌ಪೋರ್ಟ್ ಹೊಂದಿರುವ ವಿದೇಶಿ ಪ್ರಜೆಗಳಿಗೆ ಫೆಬ್ರವರಿ 5 ರ ಒಳಗೆ ನೀಡಲಾದ ಸಾಮಾನ್ಯ ವೀಸಾ, ಇ-ವೀಸಾ ಸೇರಿದಂತೆ ಎಲ್ಲಾ ವೀಸಾಗಳನ್ನು ಭಾರತದ ವಲಸೆ ಅಧಿಕಾರಿಗಳು ಸ್ಥಗಿತಗೊಳಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಭಾರತೀಯ ವೀಸಾಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಬಯಸುವವರು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಅಥವಾ ಶಾಂಘೈ ಮತ್ತು ಗುವಾಂಗ್​ ದೂತಾವಾಸಗಳನ್ನು ಸಂಪರ್ಕಿಸಬಹುದು ಎಂದು ಭಾರತದ ಆರೋಗ್ಯ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.