ಶ್ರೀನಗರ (ಜಮ್ಮು ಕಾಶ್ಮೀರ): ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ತಮ್ಮ ಮನೆಯಿಂದ ಹೊರಗೆ ಬರದಂತೆ ಸರ್ಕಾರ ತಡೆದಿದ್ದು, ಇದರಿಂದಾಗಿ ಅವರು ಈದ್ ಮಿಲಾದ್ ವೇಳೆ ಹಜ್ರತ್ಬಲ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅಡ್ಡಿಯಾಗಿದೆ ಎಂದು ಪಕ್ಷ ಆರೋಪಿಸಿದೆ.
-
J&K administration has blocked the residence of Party President Dr Farooq Abdullah and stopped him from offering prayers at Dargah Hazratbal. JKNC condemns this infringement of fundamental right to pray, especially on the auspicious occasion of Milad Un Nabi SAW.
— JKNC (@JKNC_) October 30, 2020 " class="align-text-top noRightClick twitterSection" data="
">J&K administration has blocked the residence of Party President Dr Farooq Abdullah and stopped him from offering prayers at Dargah Hazratbal. JKNC condemns this infringement of fundamental right to pray, especially on the auspicious occasion of Milad Un Nabi SAW.
— JKNC (@JKNC_) October 30, 2020J&K administration has blocked the residence of Party President Dr Farooq Abdullah and stopped him from offering prayers at Dargah Hazratbal. JKNC condemns this infringement of fundamental right to pray, especially on the auspicious occasion of Milad Un Nabi SAW.
— JKNC (@JKNC_) October 30, 2020
ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ''ಜಮ್ಮು ಕಾಶ್ಮೀರ ಪ್ರಾಧಿಕಾರಗಳು ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿರುವಂತೆ ನಿರ್ಬಂಧಿಸಿದ್ದು, ಅವರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ'' ಎಂದು ಆರೋಪಿಸಿದೆ.
ಇದರ ಜೊತೆಗೆ ಇದು ಮೂಲಭೂತ ಹಕ್ಕುಗಳ ದಮನವಾಗಿದ್ದು, ಈದ್ ಮಿಲಾದ್ನಂತಹ ಪವಿತ್ರ ದಿನದಲ್ಲಿ ಈ ರೀತಿಯಾಗಿ ನಡೆದಿರುವುದು ಆಕ್ಷೇಪಾರ್ಹ ಎಂದು ಟ್ವೀಟ್ನಲ್ಲಿ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.
ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಟ್ವಿಟರ್ನಲ್ಲಿ ಮಾಡಿದ ಆರೋಪಕ್ಕೆ ಅಥವಾ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿಯೇ ನಿರ್ಬಂಧಿಸಿರುವುದರ ಬಗ್ಗೆ ಜಮ್ಮು ಕಾಶ್ಮೀರ ಸರ್ಕಾರದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.