ETV Bharat / bharat

ಪಟ್ಟು ಬಿಡದ ರೈತರು: ಕೃಷಿ ಮಸೂದೆ ಹಿಂಪಡೆಯುವವರೆಗೂ ಹೋರಾಟ ಎಂದ ಅನ್ನದಾತರು

ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ವಿಜ್ಞಾನ ಭವನದಲ್ಲಿ ನಡೆದ 4ನೇ ಸುತ್ತಿನ ಮಾತುಕತೆ ಸಹ ಫಲ ನೀಡದೆ ಮತ್ತೊಂದು ಸಭೆಗೆ ದಾರಿ ಮಾಡಿಕೊಟ್ಟಿದೆ. ರೈತರು ಪಟ್ಟುಬಿಡದೆ ಕೃಷಿ ಮಸೂದೆ ಹಿಂಪಡೆಯುವಂತೆ ಪಟ್ಟುಹಿಡಿದಿದ್ದಾರೆ. ಸದ್ಯ ನಾಳೆಯ ಮತ್ತೊಂದು ಸಭೆಯಲ್ಲಿ ಈ ಕುರಿತು ನಿರ್ಧಾರವಾಗುವ ಸಾಧ್ಯತೆ ಇದೆ.

farmers-stir-live-farmers-refuse-to-stop-protest-till-farm-laws-are-repealed
ಕೃಷಿ ಮಸೂದೆ ಹಿಂಪಡೆಯುವರೆಗೂ ಹೋರಾಟ ಎಂದ ಅನ್ನದಾತ
author img

By

Published : Dec 4, 2020, 7:53 AM IST

ನವದೆಹಲಿ: ಕೃಷಿ ಮಸೂದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಮಸೂದೆಗಳನ್ನು ಹಿಂಪಡೆಯುವವರೆಗೂ ಹಿಂದೆ ಸರಿಯುವ ಮಾತೇ ಇಲ್ಲವೆಂದು ಸಂಘಟನೆಗಳು ಪಟ್ಟುಹಿಡಿದಿವೆ.

ಈ ಕುರಿತಂತೆ ಸರ್ಕಾರದ ಜೊತೆ ನಡೆದ ಮತ್ತೊಂದು ಹಂತದ ಮಾತುಕತೆ ವಿಫಲವಾಗಿದೆ. ಕಾನೂನಿನಲ್ಲಿನ ನ್ಯೂನ್ಯತೆ ಸರಿಪಡಿಸಿಕೊಳ್ಳುವ ಕುರಿತು ಒಪ್ಪಿಗೆ ಸೂಚಿಸದೆ ಮಸೂದೆಯನ್ನು ಹಿಂಪಡೆಯಬೇಕಾಗಿ ರೈತ ಮುಖಂಡರು ಆಗ್ರಹಿಸಿದ್ದಾರೆ. ಇದಲ್ಲದೆ ಮಾಲಿನ್ಯ ಎಸಗುವ ರೈತರ ವಿರುದ್ಧ ಹಾಕಲಾಗುವ ದಂಡವನ್ನು ತೆಗೆಯುವಂತೆಯೂ ಒತ್ತಾಯಿಸಿದ್ದಾರೆ.

ಗುರುವಾರ ವಿಜ್ಞಾನ ಭವನದಲ್ಲಿ ನಡೆದ 4ನೇ ಸುತ್ತಿನ ಮಾತುಕತೆಯ ಬಳಿಕ ಮಾತನಾಡಿದ ಪಂಜಾಬ್​​ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಮುಖಂಡ ದರ್ಶನ್ ಪಾಲ್​, ಎಲ್ಲಾ ರೈತ ಮುಖಂಡರೂ ಸರ್ಕಾರದೊಂದಿಗೆ ಸಭೆ ನಡೆಸಲು ಸಿದ್ಧರಿದ್ದಾರೆ. ಮೊದಲ ಅರ್ಧ ಗಂಟೆಯವರೆಗೂ, ಮಂತ್ರಿ ಕೃಷಿ ಮಸೂದೆಗಳ ಕುರಿತು ವಿವರಿಸಿದರು. ಬಳಿಕ ನಾವು ನಮ್ಮ ಬೇಡಿಕೆ ಹಾಗೂ ಆತಂಕ ಕುರಿತು ತಿಳಿಸಿದ್ದೇವೆ ಎಂದಿದ್ದಾರೆ.

ಸಭೆಯಲ್ಲಿ ಕೃಷಿ ಮಸೂದೆಯಲ್ಲಿ ಕೆಲ ತಿದ್ದುಪಡಿ ತರಲು, ಮಾಲಿನ್ಯ ತಡೆಗಟ್ಟುವ ಕಾಯ್ದೆಯಿಂದ ಕೃಷಿಯನ್ನು ತೆಗೆದುಹಾಕಲು ಹಾಗೂ ಎಂಎಸ್​​​ಪಿ ಕುರಿತು ಸರ್ಕಾರ ಭರವಸೆ ನೀಡಿದೆ. ಡಿಸೆಂಬರ್ 4ರಂದು ಸರ್ಕಾರ ಸಭೆ ನಿಗದಿ ಮಾಡಿತ್ತು. ಆದರೆ ನಾವು ಡಿಸೆಂಬರ್ 5ರಂದು ಸಭೆ ನಡೆಸಲು ಸಮಯ ಕೇಳಿದ್ದು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ರೈತ ಮುಖಂಡ ಹರ್ಷವಿಂದರ್ ಸಿಂಗ್ ಮಾತನಾಡಿ, ಸಚಿವರು ಈ ಕಾನೂನಿನಲ್ಲಿರುವ ನ್ಯೂನ್ಯತೆಗಳ ಬಗ್ಗೆ ಹೇಳುವಂತೆ ಕೇಳಿದರು. ಇಡೀ ಮಸೂದೆಯೇ ನ್ಯೂನ್ಯತೆಯಿಂದ ಕೂಡಿದೆ ಎಂದು ಅವರಿಗೆ ತಿಳಿಸಿದ್ದೇವೆ. ಡಿಸೆಂಬರ್ 5ರಂದು ಮತ್ತೆ ಸಭೆ ಸೇರಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಮುಂದುವರಿದ ಕೇಂದ್ರ ಸರ್ಕಾರ, ರೈತರ ನಡುವಿನ ಜಟಾಪಟಿ: ಡಿ.5ಕ್ಕೆ ಮತ್ತೊಂದು ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.