ಜೈಪುರ (ರಾಜಸ್ಥಾನ): ಕೊರೊನಾ ವೈರಸ್ ಭೀತಿ ನಡುವೆಯೇ ಭವ್ಯವಾದ ವಿವಾಹ ಆಯೋಜಿಸಿದ್ದ ಕುಟುಂಬಕ್ಕೆ ಭಿಲ್ವಾರಾ ಜಿಲ್ಲಾಡಳಿತವು 6.26 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮದುವೆ ಸಮಾರಂಭಕ್ಕೆ 50ಕ್ಕಿಂತ ಹೆಚ್ಚು ಮಂದಿ ಅತಿಥಿಗಳನ್ನು ಆಹ್ವಾನಿಸದಂತೆ ಆದೇಶಿಸಲಾಗಿದೆ. ಆದರೆ ಭಿಲ್ವಾರಾದಲ್ಲಿ ನಡೆದ ವಿವಾಹದಲ್ಲಿ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅಲ್ಲದೆ ಯಾವುದೇ ನಿನಿಯಮಗಳನ್ನೂ ಪಾಲಿಸಿರಲಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ಜೂನ್ 13ರಂದು ವಿವಾಹ ನಡೆದಿತ್ತು. ಮದುವೆಯಲ್ಲಿ ಭಾಗವಹಿಸಿದವರ ಪೈಕಿ ವರ ಸೇರಿದಂತೆ 15 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು
ವರನ ಅಜ್ಜ ಕೋವಿಡ್-19 ಗೆ ಬಲಿಯಾಗಿದ್ದು, ಅವರ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಕೂಡ ಸೋಂಕಿಗೆ ತುತ್ತಾಗಿದ್ದಾರೆ. ವಧು ಸೇರಿದಂತೆ ಇತೆರ 17 ಮಂದಿಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಸೋಂಕಿತರೆಲ್ಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತರ ಚಿಕಿತ್ಸೆ ಮತ್ತು ಕ್ವಾರಂಟೈನ್ ವೆಚ್ಚ 6,26,600 ರೂಪಾಯಿ ಹಣವನ್ನು ದಂಡದ ರೂಪದಲ್ಲಿ ಪಾವತಿಸುವಂತೆ ಸರ್ಕಾರ ನೋಟಿಸ್ ನೀಡಿದೆ.