ETV Bharat / bharat

ಪೊಲೀಸರ ಮೇಲೆ ಗುಂಡಿನ ದಾಳಿ ಪ್ರಕರಣ: ಸ್ಥಳಕ್ಕೆ ತಲುಪಿದ ಮೃತ ಸಿಬ್ಬಂದಿ ಕುಟುಂಬಸ್ಥರು - ಕಾನ್ಪುರ ಪೊಲೀಸರ ಮೇಲೆ ಗುಂಡಿನ ದಾಳಿ

ಕಾನ್ಪುರದ ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕಾರು ಗ್ರಾಮದಲ್ಲಿ ತಡರಾತ್ರಿ ದುಷ್ಕರ್ಮಿಗಳನ್ನು ಹಿಡಿಯಲು ಹೋದ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆದಿದ್ದು, ಸಿಒ ಸೇರಿದಂತೆ ಎಂಟು ಪೊಲೀಸರು ಸಾವನ್ನಪ್ಪಿದ್ದಾರೆ. ಸದ್ಯ ಮೃತಪಟ್ಟ ಸಿಬ್ಬಂದಿಯ ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ.

families of martyred police personnel reaching mortuary in kanpur
ಕಾನ್ಪುರ ಪೊಲೀಸರ ಮೇಲೆ ಗುಂಡಿನ ದಾಳಿ: ಸ್ಥಳಕ್ಕೆ ತಲುಪಿದ ಪೊಲೀಸರ ಕುಟುಬಂಸ್ಥರು
author img

By

Published : Jul 3, 2020, 12:57 PM IST

Updated : Jul 3, 2020, 1:32 PM IST

ಕಾನ್ಪುರ(ಉತ್ತರ ಪ್ರದೇಶ): ಜಿಲ್ಲೆಯ ತಡರಾತ್ರಿ ದುಷ್ಕರ್ಮಿಗಳನ್ನು ಬಂಧಿಸಲು ತೆರಳಿದ ಪೊಲೀಸ್ ತಂಡದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಸಿಒ ಸೇರಿದಂತೆ ಎಂಟು ಪೊಲೀಸರು ಸಾವನ್ನಪ್ಪಿದ್ದಾರೆ. ಮೃತ ಪೊಲೀಸ್​ ಸಿಬ್ಬಂದಿ ಆಕ್ರಂದನ ಮುಗಿಲು ಮುಟ್ಟಿದ್ದು, ಸದ್ಯ ಮೃತಪಟ್ಟ ಸಿಬ್ಬಂದಿಯ ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ.

ಕಾನ್ಪುರ ಪೊಲೀಸರ ಮೇಲೆ ಗುಂಡಿನ ದಾಳಿ: ಸ್ಥಳಕ್ಕೆ ತಲುಪಿದ ಪೊಲೀಸರ ಕುಟುಂಬಸ್ಥರು

ಘಟನೆಯಲ್ಲಿ ಇನ್ನೂ 6 ಪೊಲೀಸರು ಸೇರಿದಂತೆ 7 ಜನರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಪಡೆ ತಕ್ಷಣ ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕಾನ್ಪುರದ ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕಾರು ಗ್ರಾಮದಲ್ಲಿ ಈ ಕಾಳಗ ನಡೆದಿದೆ. ಗುರುವಾರ ರಾತ್ರಿ 12: 30ರ ಸುಮಾರಿಗೆ ಕುಖ್ಯಾತ ರೌಡಿ ವಿಕಾಸ್ ದುಬೆ ಎಂಬಾತ ತನ್ನ ಮನೆಯಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದಾರೆ. ಆದರೆ, ಪೊಲೀಸ್​ ದಾಳಿಯ ಮಾಹಿತಿ ತಿಳಿದ ವಿಕಾಸ್ ಮತ್ತು ಅವನ ಒಡನಾಡಿಗಳು ಪೊಲೀಸರ ಮೇಲೆ ಗುಂಡು ಹಾರಿಸಲಾರಂಭಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಸಿಒ ಬಿಲೂರ್ ದೇವೇಂದ್ರ ಸಿಂಗ್ ಮತ್ತು ಎಸ್‌ಒ ಶಿವರಾಜ್‌ಪುರ ಮಹೇಶ್ ಯಾದವ್ ಸೇರಿದಂತೆ ಎಂಟು ಮಂದಿ ಬಲಿಯಾಗಿದ್ದಾರೆ.

Last Updated : Jul 3, 2020, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.