ಭಾರತಕ್ಕೆ ಇನ್ನೇನು ಕೆಲವೇ ಗಂಟೆಗಳಲ್ಲಿ ಬಂದಿಳಿಯಲಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಹುಟ್ಟು: ಜೂನ್ 14, 1946
ಜನ್ಮ ಸ್ಥಳ: ನ್ಯೂಯಾರ್ಕ್
ಜನ್ಮ ನಾಮ: ಡೊನಾಲ್ಡ್ ಜಾನ್ ಟ್ರಂಪ್
ಪೋಷಕರು: ಫ್ರೆಡ್ ಟ್ರಂಪ್ ಹಾಗೂ ಮೇರಿ ಟ್ರಂಪ್ ದಂಪತಿಯ ಪುತ್ರ. ಟ್ರಂಪ್ ತಂದೆ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರು.
ಪತ್ನಿಯರು:
ಟ್ರಂಪ್ ಈವರೆಗೂ ಮೂರು ಬಾರಿ ಮದುವೆಯಾಗಿದ್ದಾರೆ. 1977 ಇವಾನಾ ಟ್ರಂಪ್ ಅವರೊಂದಿಗೆ ದಾಂಪತ್ಯ ಜೀವನ ನಡೆಸಿ 1990ರ ವೇಳೆಗೆ ವಿಚ್ಛೇದನ ನೀಡಿದರು. 1993-ಜೂನ್ ನಲ್ಲಿ ಮಾರ್ಲಾ ಟ್ರಂಪ್ ರನ್ನು ಮದುವೆಯಾಗಿ 1999ರಲ್ಲಿ ಬೇರೆಯಾದರು. ಜನವರಿ 22, 2005 ರಂದು ಮೆಲಾನಿಯಾ ಟ್ರಂಪ್ ಅವರೊಂದಿ ಮದುವೆಯಾದರು.
ಟ್ರಂಪ್ ಒಟ್ಟು ಮಕ್ಕಳು:
ಟ್ರಂಪ್ ಅವರಿಗೆ ಐವರು ಮಕ್ಕಳಿದ್ದು, ಮೆಲಾನಿಯಾ ಟ್ರಂಪ್ ಅವರೊಂದಿಗೆ ಬ್ಯಾರನ್ ಎಂಬ ಮಗ, ಮಾರ್ಲಾ ಮ್ಯಾಪಲ್ಸ್ ಅವರೊಂದಿಗೆ ಟಿಫಾನಿ ಎಂಬ ಮಗಳು ಹಾಗೂ ಇವಾನಾ ಟ್ರಂಪ್ ಅವರೊಂದಿಗೆ ಎರಿಕ್, ಇವಾಂಕಾ, ಡೊನಾಲ್ಡ್ ಜೂನಿಯರ್ ಎಂಬ ಮೂರು ಮಕ್ಕಳಿದ್ದಾರೆ.
ಅಮೆರಿಕ ಅದ್ಯಕ್ಷರ ವಿದ್ಯಾಭ್ಯಾಸ:
ಅದ್ಯಕ್ಷರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಫೋರ್ಡ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಅನಂತರ ವಾರ್ಟನ್ ಸ್ಕೂಲ್ ಆಫ್ ಫಿನಾನ್ಸ್ ನಲ್ಲಿ ಹಣಕಾಸು ವ್ಯವಹಾರ (ಫಿನಾನ್ಸ್ ಮ್ಯಾನೇಜ್ ಮೆಂಟ್) ಓದಿದ ಅವರು, 1968ರಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎಸ್ ಮುಗಿಸಿದರು.
ಟ್ರಂಪ್ ವೃತ್ತಿಯ ಹಾದಿ:
ಟ್ರಂಪ್ ಮೊದಲಿಗೆ ರಿಯಲ್ ಎಸ್ಟೇಟ್ ಡೆವಲಪರ್ ಆಗಿ ತನ್ನ ತಂದೆಯ ದಾರಿಯಲ್ಲಿ ನಡೆದರು. ನಂತರ ರಿಯಾಲಿಟಿ ಟೆಲಿವಿಷನ್ ತಾರೆಯಾಗಿ ಮಿಂಚಿದರು. ಹೊರ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಂಡು ಏಳಿಗೆ ಕಾಣುತ್ತಿದ್ದಂತೆ ಅವರು ತಮ್ಮ ಹೆಸರನ್ನು ಬ್ರಾಂಡ್ ಆಗಿ ಪರಿವರ್ತಿಸಿದರು. ಅನಂತರ ಪರವಾನಗಿ ಪಡೆದು ಉತ್ಪನ್ನಗಳಲ್ಲಿ ಟ್ರಂಪ್ ಹೆಸರು ರಾರಾಜಿಸಿತು. ಅವುಗಳಲ್ಲಿ ಬೋರ್ಡ್ ಆಟಗಳು, ಸ್ಟೀಕ್ಸ್, ಕಲೋನ್, ವೋಡ್ಕಾ, ಪೀಠೋಪಕರಣಗಳು ಮತ್ತು ಪುರುಷರ ಉಡುಪುಗಳು ಸೇರಿವೆ.
ನಟನೆಗೂ ಸೈ ಎಂದಿದ್ದ ದೊಡ್ಡಣ್ಣ ಅಧ್ಯಕ್ಷ:
ಕ್ಯಾಮೆರಾ ಮುಂದೆ ಬಂದ ಟ್ರಂಪ್ , " ಝೂಲಾಂಡರ್," "ಸೆಕ್ಸ್ ಅಂಡ್ ದಿ ಸಿಟಿ" ಮತ್ತು "ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್" ಸೇರಿದಂತೆ ಇತರ ಚಲನಚಿತ್ರಗಳಲ್ಲಿ ಮತ್ತು ದೂರದರ್ಶನದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಭಾರಿ ಪ್ರಸಿದ್ಧಿ ಪಡೆದಿರುವ ಡಬ್ಲ್ಯೂ ಡಬ್ಲ್ಯೂ ಎಫ್ ರೆಸಲಿಂಗ್ ನಲ್ಲಿಯೂ ಅವರು ಕಾಣಿಸಿಕೊಂಡಿದ್ದರು.