ETV Bharat / bharat

ಶ್ರೀರಾಮನವಮಿಯಂದೇ ರಾಮಜನ್ಮಭೂಮಿ ನಿರ್ಜನ: ಲಾಕ್​ಡೌನ್​ ನಂತರದ ವಾಸ್ತವ ಇಲ್ಲಿದೆ.. - ಸರಯೂ ನದಿ

ಕೊರೊನಾ ಹರಡದಂತೆ ತಡೆಯಲು ಲಾಕ್​ಡೌನ್​ ಅನ್ನು ಉತ್ತರಪ್ರದೇಶದಲ್ಲಿ ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಇದರಿಂದಾಗಿ ರಾಮನವಮಿಯಂದೇ ರಾಮಜನ್ಮಭೂಮಿ ಬಿಕೋ ಅಂತಿದೆ.

Ram janmabhoomi
ರಾಮಜನ್ಮಭೂಮಿ
author img

By

Published : Apr 2, 2020, 1:37 PM IST

ಲಖನೌ (ಉತ್ತರಪ್ರದೇಶ): ರಾಮಜನ್ಮಭೂಮಿ ವಿವಾದ ಬಗೆಹರಿದ ನಂತರ ಮೊದಲ ರಾಮನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಕೊರೊನಾ ಮಹಾಮಾರಿಯ ಕಾರಣದಿಂದ ಶ್ರೀರಾಮನವಮಿಯಾದ ಇಂದು ಅಯೋಧ್ಯೆಯಲ್ಲಿ ಖಾಲಿ ರಸ್ತೆಗಳು, ನಿರ್ಜನ ದೇವಾಲಯಗಳಷ್ಟೇ ಉಳಿದುಕೊಂಡಿವೆ.

ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್​ ನಾಂದಿ ಹಾಡಿ, ಸ್ಪಷ್ಟವಾದ ಮಾರ್ಗವನ್ನು ಸೂಚಿಸಿ, ಟ್ರಸ್ಟ್​ ನಿರ್ಮಾಣವನ್ನು ಕೂಡಾ ಮಾಡಿತ್ತು. ಶಿಶುರಾಮನ ಪ್ರತಿಮೆಯನ್ನು ಕೂಡಾ ರಾಮಮಂದಿರ ನಿರ್ಮಾಣದ ಸ್ಥಳವಾದ ಮಾನಸ ಭವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇಲ್ಲಿ ಅದ್ಧೂರಿಯಾಗಿ ಶ್ರೀರಾಮನವಮಿ ಆಚರಿಸಲು ಹಿಂದೂಪರ ಸಂಘಟನೆಗಳು ತೀರ್ಮಾನ ತೆಗೆದುಕೊಂಡಿದ್ದವು. ಈಗ ಕೊರೊನಾ ವ್ಯಾಪಿಸುತ್ತಿರುವ ಕಾರಣಕ್ಕೆ ಎಲ್ಲ ಆಚರಣೆಗಳನ್ನು ಮುಂದೂಡಲಾಗಿದೆ.

ಲಾಕ್​ಡೌನ್​ ಅನ್ನು ಉತ್ತರಪ್ರದೇಶದಲ್ಲಿ ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪ್ರತಿವರ್ಷ ನವರಾತ್ರಿ ವೇಳೆ ಆಚರಿಸಿಕೊಂಡು ಬರುತ್ತಿದ್ದ ಕನ್ಯಾ ಪೂಜೆಯನ್ನು ಕೂಡಾ ಆಚರಿಸಬಾರದೆಂದು ನಿರ್ಬಂಧ ಹೇರಲಾಗಿದೆ. ಕೊರೊನಾ ಬಾಲಕಿಯರಿಗೆ ಹೊರಗೆ ಬಂದು ಕೊರೊನಾ ಹರಡದಂತೆ ಜಾಗ್ರತೆ ವಹಿಸಬೇಕೆಂದು ಅಯೋಧ್ಯೆಯಲ್ಲಿ ಸುಮಾರು ಏಳು ದಶಕಗಳಿಂದ ಇರುವ 78 ವರ್ಷದ ರಾಮ್​ ಚರಣ್​ ಶ್ರೀವತ್ಸ ಹೇಳುವ ಮಾತು.

''ನಾನು ಎಂದಿಗೂ ಈ ನಗರವನ್ನು ಈ ರೀತಿಯಾಗಿ ನೋಡಿರಲಿಲ್ಲ. ರಾಮಮಂದಿರ ಧ್ವಂಸವಾದ್ಮೇಲೇ ಇಲ್ಲಿ ಯಾವುದೇ ಗಲಭೆಗಳು ನಡೆದಿರಲಿಲ್ಲ. ಕನಿಷ್ಠ ಜನರು ತಮ್ಮ ಮನೆಗಳ ಕಿಟಿಕಿಗಳಿಂದ ಹಾಗೂ ಟೆರೇಸ್​ ಮೇಲಿಂದ ಇಣುಕುತ್ತಿದ್ದರು. ಇಂದು ಎಲ್ಲಾ ದೇವಸ್ಥಾನಗಳು ಮುಚ್ಚಿವೆ. ದೇವರಿಗೆ ಆರತಿ ಮಾಡುವುದು ನಮಗೆ ಕೇಳಿಸಿದರೂ ಅಲ್ಲಿಗೆ ತಲುಪಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಸ್ಥಳೀಯರಿಗೂ ಕೂಡಾ ಸರಯೂ ನದಿ ತೀರದ ಘಾಟ್​ಗಳಿಗೆ ಬರುವುದು ಹಾಗೂ ನದಿ ನೀರಿನಲ್ಲಿ ಪವಿತ್ರ ಸ್ನಾನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಕೇವಲ ಪುರೋಹಿತರಿಗಾಗಿ ಮಾತ್ರ ದೇವಾಲಯಗಳಿಗೆ ಅವಕಾಶ ನೀಡಲಾಗಿದೆ ಎಂಬುದು ಅಂಗಡಿ ಮಾಲೀಕರೊಬ್ಬರ ಅಳಲು

ಲಾಕ್​ಡೌನ್​ ಘೋಷಣೆಯಾಗುವ ಮೊದಲು ಉತ್ತರಪ್ರದೇಶ ರಾಜ್ಯ ಸರ್ಕಾರ ಅಯೋಧ್ಯೆಯ ಎಲ್ಲಾ ಗಡಿಗಳನ್ನು ಮುಚ್ಚಿತ್ತು. ಎಲ್ಲಾ ಸಂತರು ಹಾಗೂ ಭಕ್ತರಿಗೆ ನವರಾತ್ರಿ, ಶ್ರೀರಾಮನವಮಿಯಂದು ಬರಲು ಸೂಚಿಸಲಾಗಿತ್ತು. ರಾಮನವಮಿಗೆ ಎರಡು ದಿನಗಳ ಹಿಂದೆ ಸಾದತ್​ಗಂಜ್​ ಹಾಗೂ ದೇವಕಲಿಯ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿತ್ತು. ಆದಷ್ಟೂ ಬೇಗ ಎಲ್ಲಾ ಸಮಸ್ಯೆ ನಿವಾರಣೆಯಾಗುವ ಭರವಸೆಯಲ್ಲಿ ಅಲ್ಲಿನ ಜನರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.