ETV Bharat / bharat

ಐಎನ್​ಎಕ್ಸ್​ ಮೀಡಿಯಾ ಹಗರಣ: ಇ.ಡಿಯಿಂದ ಮೊದಲ ಚಾರ್ಜ್‌​ಶೀಟ್​​​, ಚಿದಂಬರಂಗೆ ಸಂಕಷ್ಟ

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮೇಲೆ ಜಾರಿ ನಿರ್ದೇಶನಾಲಯ ಪಾಸ್​ವರ್ಡ್​ ಇರುವ ಇ- ಚಾರ್ಜ್‌ಶೀಟ್ ಅನ್ನು​ ದೆಹಲಿಯ ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದೆ.

author img

By

Published : Jun 3, 2020, 10:19 AM IST

ನವದೆಹಲಿ : ಐಎನ್​ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್​ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

ಪಾಸ್​ವರ್ಡ್​ ಇರುವ ಇ-ಚಾರ್ಜ್​ ಶೀಟ್ ಅನ್ನು ಚಿದಂಬರ್​ ವಿರುದ್ಧ ಸಲ್ಲಿಸಲಾಗಿದ್ದು, ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೊದಲ ಚಾರ್ಜ್‌ಶೀಟ್​ ಇದಾಗಿದೆ.

ಈ ಚಾರ್ಜ್​ಶೀಟ್​ನಲ್ಲಿ ಚಿದಂಬರಂ, ಪುತ್ರ ಕಾರ್ತಿ ಹಾಗೂ ಚಾರ್ಟೆಡ್​ ಅಕೌಂಟೆಂಟ್​ ಎಸ್​.ಎಸ್​​.ಭಾಸ್ಕರರಾಮನ್​ ಮುಂತಾದವರ ಹೆಸರನ್ನು ಉಲ್ಲೇಖಿಸಲಾಗಿದೆ. ಸದ್ಯ ಇ- ಚಾರ್ಜ್​ಶೀಟ್​ ಅನ್ನು ಸಲ್ಲಿಕೆ ಮಾಡಲಾಗಿದ್ದು, ನ್ಯಾಯಾಲಯದ ಕಾರ್ಯಗಳು ಸಾಮಾನ್ಯ ಸ್ಥಿತಿಗೆ ಬಂದಾಗ ಮಾಮೂಲಿಯಂತೆ ಮುದ್ರಿತ ಪ್ರತಿ (ಹಾರ್ಡ್​ ಕಾಪಿ)ಯಲ್ಲಿ ಚಾರ್ಜ್​ ಶೀಟ್​ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಪಿ.ಚಿದಂಬರಂ ಅನ್ನು ಹಿಂದಿನ ವರ್ಷ ಆಗಸ್ಟ್​ 21ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದಿತ್ತು. ಅದೇ ವರ್ಷ ಅಕ್ಟೋಬರ್ 16ರಂದು ಜಾರಿ ನಿರ್ದೇಶನಾಲಯವೂ ಕೂಡಾ ಚಿದಂಬರಂ ಅನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈಗ ಚಾರ್ಜ್​ ಶೀಟ್​ ಸಲ್ಲಿಕೆ ಮಾಡಿದ್ದು, ಕೇಂದ್ರದ ಮಾಜಿ ಸಚಿವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.