ETV Bharat / bharat

ಇಂಗ್ಲೆಂಡ್​ನಲ್ಲಿ​ ಅತ್ಯಾಚಾರ: ಭಾರತದಲ್ಲಿ ಅವಿತಿದ್ದವನ ಸುಳಿವು ಕೊಟ್ಟಿದ್ದು ಇಯರ್​ಫೋನ್! - undefined

ಅಜಯ್​ ರಾಣಾ (35) , 2017 ಡಿಸೆಂಬರ್​ 9ರಂದು ಇಂಗ್ಲೆಂಡ್​ನಲ್ಲಿ ಮಹಿಳೆಯೊಬ್ಬಳಿಗೆ ಕಾರಿನಲ್ಲಿ ಲಿಫ್ಟ್​ ನೀಡುವುದಾಗಿ ಹೇಳಿ,ಮಾರ್ಗ ಮಧ್ಯೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆನಂತರ ತನ್ನ ತಾಯಿಗೆ ಹುಷಾರಿಲ್ಲವೆಂದು ನೆಪ ಹೇಳಿ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ.

ಇಂಗ್ಲೆಂಡ್
author img

By

Published : Jun 5, 2019, 3:26 PM IST

ಲಂಡನ್​: ಎರಡು ವರ್ಷಗಳ ಹಿಂದೆ ಇಂಗ್ಲೆಂಡ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಭಾರತದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗೆ ಇದೀಗ ಇಂಗ್ಲೆಂಡ್​ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಜಯ್​ ರಾಣಾ (35) ಅತ್ಯಾಚಾರ ಪ್ರಕರಣದಲ್ಲಿ ಇಂಗ್ಲೆಂಡ್​ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾನೆ. ಇಂಗ್ಲೆಂಡ್​ನಲ್ಲಿ ಅತ್ಯಾಚಾರ ಎಸಗಿರುವ ಆರೋಪಿ ಭಾರತದಲ್ಲಿ ತಲೆಮರೆಸಿಕೊಂಡಿದ್ದ. ಆದರೆ 2 ವರ್ಷಗಳ ನಂತರ ಸ್ಪೇನ್​ನಲ್ಲಿ ಈತನನ್ನು ಬಂಧಿಸಲಾಗಿತ್ತು ಎಂದು ಇಂಗ್ಲೆಂಡ್​ ಪೊಲೀಸರು ತಿಳಿಸಿದ್ದಾರೆ.

UK
ಅಜಯ್​ ರಾಣಾ (ಕೃಪೆ: suffolk.police.uk)

ಇಯರ್​ಫೋನ್​ ನೀಡಿತ್ತು ಆರೋಪಿಯ ಸುಳಿವು:

2017 ಡಿಸೆಂಬರ್​ 9ರಂದು ಇಂಗ್ಲೆಂಡ್​ನಲ್ಲಿ ಮಹಿಳೆಯೊಬ್ಬರಿಗೆ ಕಾರಿನಲ್ಲಿ ಲಿಫ್ಟ್​ ನೀಡುವುದಾಗಿ ಹೇಳಿ, ಮಾರ್ಗಮಧ್ಯೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಆನಂತರ ತನ್ನ ತಾಯಿಗೆ ಹುಷಾರಿಲ್ಲವೆಂದು ನೆಪ ಹೇಳಿ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ.

ಮಹಿಳೆ ನೀಡಿದ ದೂರಿನಂತೆ ತನಿಖೆಗೆ ಮುಂದಾದ ಪೊಲೀಸರು ಸಿಸಿಟಿವಿಯಲ್ಲಿ ಕಾರು​ ಪತ್ತೆ ಮಾಡಿದ್ದರು. ಕಾರ್​ ಹುಡುಕಿ ಹೊರಟಾಗ ಅದು ರಾಣಾನ ಗೆಳೆಯನದ್ದು ಎಂದು ತಿಳಿದುಬಂದಿತ್ತು. ಪರಿಶೀಲನೆ ವೇಳೆ ಕಾರಿನಲ್ಲಿ ಪೊಲೀಸರಿಗೆ ಇಯರ್​ಫೋನ್​ ಸಿಕ್ಕಿತ್ತು. ಅಂದು ಕಾರ್​ ರಾಣಾ ಬಳಿ ಇತ್ತು ಎಂದು ಅರಿತ ಪೊಲೀಸರು, ಇಯರ್​ಫೋನ್​ ಮೂಲಕ ಡಿಎನ್​ಎ ಪರೀಕ್ಷೆ ಮಾಡಿಸಿದಾಗ, ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದು ರಾಣಾ ಎಂಬುದು ಸ್ಪಷ್ಟವಾಗಿತ್ತು. ಅಂದೇ, ರಾಣಾ ವಿರುದ್ಧ ಯೂರೋಪಿಯನ್​ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿತ್ತು.

ಭಾರತದಿಂದ ಸ್ಪೇನ್​ಗೆ ಬಂದಿದ್ದ ರಾಣಾನನ್ನು ಬಂಧಿಸಿ, ಅಲ್ಲಿಂದ ಇಂಗ್ಲೆಂಡ್​ಗೆ ಹಸ್ತಾಂತರ ಮಾಡಲಾಯಿತು. 2 ವರ್ಷಗಳ ಹಿಂದೆ ಮಾಡಿದ ತಪ್ಪಿಗಾಗಿ ಇಂದು ಶಿಕ್ಷೆ ಅನುಭವಿಸುವಂತಾಗಿದೆ.

Intro:Body:

UK

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.