ETV Bharat / bharat

ಪ್ರವಾಸದ ನೆಪದಲ್ಲಿ ಮಾನವ ಕಳ್ಳ ಸಾಗಣೆಗೆ ಯತ್ನ: 5 ಮಕ್ಕಳ ರಕ್ಷಣೆ - ದೆಹಲಿ ಮಹಿಳಾ ಆಯೋಗ

ಕಳ್ಳ ಸಾಗಣೆ ಮಾಡಲಾಗುತ್ತಿದ್ದ ಐದು ಮಕ್ಕಳನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದ್ದು, ಕೃತ್ಯಕ್ಕೆ ಬೆಂಬಲಿಸಿದ ಮತ್ತು ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಪ್ಲೇಸ್‌ಮೆಂಟ್ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Women's Commission rescues 5 children
ಕಳ್ಳ ಸಾಗಣೆ
author img

By

Published : Mar 17, 2020, 4:33 PM IST

ನವದೆಹಲಿ: ದೆಹಲಿಯ ನಿಹಾಲ್ ವಿಹಾರ್ ಪೊಲೀಸ್ ಠಾಣೆ ಬಳಿ ಇರುವ ಪ್ಲೇಸ್‌ಮೆಂಟ್ ಏಜೆನ್ಸಿಯೊಂದರಿಂದ ಕಳ್ಳ ಸಾಗಣೆ ಮಾಡಲಾಗುತ್ತಿದ್ದ ಐದು ಮಕ್ಕಳನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ.

ರಕ್ಷಿಸಲಾಗಿರುವ ಐವರು ಮಕ್ಕಳಲ್ಲಿ 5 ವರ್ಷದ ಬಾಲಕಿ ಹಾಗೂ 13 ವರ್ಷದ ಬಾಲಕ ಉತ್ತರ ಪ್ರದೇಶದ ಉನ್ನಾವೋ ಮೂಲದವರಾಗಿದ್ದಾರೆ. ಉಳಿದವರು ಒಡಿಶಾ ಹಾಗೂ ಛತ್ತೀಸ್​ಗಢದವರಾಗಿದ್ದಾರೆ. ಈ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ ಪ್ಲೇಸ್‌ಮೆಂಟ್ ಏಜೆನ್ಸಿ ದೆಹಲಿಗೆ ಕರೆತಂದಿದೆ. ಈ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ದೆಹಲಿ ಮಹಿಳಾ ಆಯೋಗ ಮಾಹಿತಿ ನೀಡಿದೆ.

ಮಾನವ ಕಳ್ಳ ಸಾಗಣೆಗೆ ಬೆಂಬಲಿಸಿದ ಮತ್ತು ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಈ ಪ್ಲೇಸ್‌ಮೆಂಟ್ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.