ETV Bharat / bharat

ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿದೆ: ಸುಪ್ರೀಂಕೋರ್ಟ್

author img

By

Published : Aug 11, 2020, 6:52 PM IST

ಹೆಣ್ಣುಮಕ್ಕಳು ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ
ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ

ನವದೆಹಲಿ: ಹೆಣ್ಣುಮಕ್ಕಳು ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯಬಹುದಾಗಿದೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ.

ಹಿಂದೂ ಉತ್ತರಾಧಿಕಾರಿ (ತಿದ್ದುಪಡಿ) ಕಾಯಿದೆ-2005 ಜಾರಿಗೆ ಬರುವ ವೇಳೆ ತಂದೆಯಾಗಲಿ, ಮಗಳಾಗಲಿ ಬದುಕಿದ್ದರೇ ಅಥವಾ ನಿಧನ ಹೊಂದಿದ್ದರೇ ಅನ್ನೋದು ಇಲ್ಲಿ ಪರಿಗಣನೆಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ನ್ಯಾ. ಎಸ್. ನಜೀರ್ ಮತ್ತು ನ್ಯಾ. ಎಮ್ಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆ- 1956 ರ ಬದಲಿ ಸೆಕ್ಷನ್ 6ರಲ್ಲಿರುವ ನಿಬಂಧನೆಗಳನ್ನು ತಿದ್ದುಪಡಿ ಮಾಡಿದ್ದು, ಇದರ ಮುಂಚಿತವಾಗಿ ಅಥವಾ ನಂತರ ಜನಿಸಿದ ಮಗಳಿಗೆ, ಮಗನಂತೆಯೇ ಸಮಾನ ಆಸ್ತಿಯ ಹಕ್ಕನ್ನು ಹೊಂದುವ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ.

  • Supreme Court said that daughters will have the right over parental property even if the coparcener had died prior to the coming into force of the Hindu Succession (Amendment) Act, 2005. https://t.co/KibABSasCp

    — ANI (@ANI) August 11, 2020 " class="align-text-top noRightClick twitterSection" data=" ">

'ಕೋಪಾರ್ಸೆನರ್' ಎನ್ನುವುದು ಜನ್ಮದಿಂದ ಮಾತ್ರ ಪೋಷಕರ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕನ್ನು ಪಡೆದುಕೊಳ್ಳುವ ವ್ಯಕ್ತಿಗೆ ಬಳಸುವ ಪದ. 2005 ರ ಸೆಪ್ಟೆಂಬರ್ 9 ರಂದು ಹಿಂದೂ ಉತ್ತರಾಧಿಕಾರಿ ತಿದ್ದುಪಡಿ ಕಾಯಿದೆ ಜಾರಿಗೆ ಬಂದ ವೇಳೆ ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿದ್ದರೆ ಮಾತ್ರ ಆಕೆಗೆ ಈ ಹಕ್ಕು ಸಿಗುತ್ತದೆ ಎಂಬ ಈ ಹಿಂದಿನ ನಿರ್ಧಾರಗಳನ್ನು ಇದು ರದ್ದುಗೊಳಿಸುತ್ತದೆ.

ಒಂದೊಮ್ಮೆ ತಿದ್ದುಪಡಿಯ ವೇಳೆ ಮಗಳು ಸತ್ತಿದ್ದರೂ ಆಕೆಗೆ ತನ್ನ ತಂದೆಯ ಆಸ್ತಿಯಲ್ಲಿ ಪಾಲು ಸಲ್ಲುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಂದರೆ, ತಿದ್ದುಪಡಿಯ ದಿನಾಂಕದಂದು ಮಗಳು ಜೀವಂತವಾಗಿಲ್ಲದಿದ್ದರೂ ಕೂಡಾ ಆಕೆಯ ಮಕ್ಕಳು ತಮ್ಮ ತಾಯಿಗೆ ಸೇರಿದ ಭಾಗವನ್ನು ಪಡೆಯಲು ಹಕ್ಕು ಹೊಂದಿದವರಾಗಿರುತ್ತಾರೆ.

ನ್ಯಾಯಾಲಯವು, 'ಪುತ್ರರಂತೆಯೇ ತಿದ್ದುಪಡಿಯು ಸಹವರ್ತಿ ಸ್ಥಾನಮಾನವನ್ನು ಮಗಳಿಗೆ ವಿಸ್ತರಿಸಿದೆ ಮತ್ತು ಮಗನಂತೆಯೇ ಅದೇ ಹಕ್ಕುಗಳನ್ನು ಅನುಭವಿಸಲು ಅನುವು ಮಾಡಿಕೊಟ್ಟಿದೆ' ಎಂದು ಹೇಳಿದೆ.

ದೇಶದ ವಿವಿಧ ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳ ಮುಂದೆ ಈ ವಿಷಯದ ಮೇಲ್ಮನವಿಗಳು ಬಾಕಿ ಉಳಿದಿವೆ. "ಹೆಣ್ಣುಮಕ್ಕಳಿಗೆ ಸೆಕ್ಷನ್ 6 ರ ಮೂಲಕ ಅವರ ಸಮಾನತೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಬಾಕಿ ಇರುವ ವಿಷಯಗಳನ್ನು ಆರು ತಿಂಗಳೊಳಗೆ ಸಾಧ್ಯವಾದಷ್ಟು ನಿರ್ಧರಿಸಬೇಕೆಂದು ನಾವು ವಿನಂತಿಸುತ್ತೇವೆ" ಎಂದು ನ್ಯಾಯಪೀಠ ಹೇಳಿದೆ.

ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವ 1956 ರ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡುವುದರಿಂದ ಹಿಂದಿನ ನ್ಯಾಯಾಲಯದ ತೀರ್ಪು ಬಂದಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.