ETV Bharat / bharat

ಜೈಲು ಶಿಕ್ಷೆಗೊಳಗಾಗಿದ್ದ, ಕೊರೊನಾ ಸೋಂಕಿತ ಅಧಿಕಾರಿ ಆತ್ಮಹತ್ಯೆ - COVID-positive officer

ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಧಿಕಾರಿಯೊಬ್ಬರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

COVID-positive officer
COVID-positive officer
author img

By

Published : Jan 25, 2021, 5:10 PM IST

ಜೈಪುರ್ (ರಾಜಸ್ಥಾನ): ಲಂಚ ಪಡೆದ ಆರೋಪದಲ್ಲಿ ಕಳೆದ ವಾರ ಜೈಲು ಶಿಕ್ಷೆಗೊಳಗಾಗಿದ್ದ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

45 ವರ್ಷದ ವಿನಯ್ ಕುಮಾರ್​ ಮಂಗಲ, 2016ರಲ್ಲಿ 1 ಲಕ್ಷ ರೂ. ನಗದು ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಸಿಬಿಐ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇವರಿಗೆ ಜೈಪುರ್ ಕೋರ್ಟ್ ಕಳೆದ ವಾರ ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿತ್ತು ಎಂದು ಡೆಪ್ಯುಟಿ ಪೊಲೀಸ್ ಕಮೀಷನರ್​ ಅಬ್ಜಿತ್​ ಸಿಂಗ್ ಹೇಳಿದ್ದಾರೆ.

ಓದಿ: ಕೋವಿಡ್ ವ್ಯಾಕ್ಸಿನ್ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಕೇಂದ್ರದಿಂದ ಎಚ್ಚರಿಕೆ

ಪೊಲೀಸರು ವಶಕ್ಕೆ ಪಡೆದುಕೊಂಡ ಬಳಿಕ ಅಪರಾಧಿ ಅಧಿಕಾರಿಗೆ ಕೊರೊನಾ ಟೆಸ್ಟ್ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ರಾಜಸ್ಥಾನ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಕೋವಿಡ್ ವಾರ್ಡ್​ನಲ್ಲಿ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲ ಕೋಟಾ ನಿವಾಸಿಯಾಗಿದ್ದ ಇವರು ಝಲ್ವಾರ್ ಎಂಬಲ್ಲಿ ತೆರಿಗೆ ಪಾವತಿ ದಂಡ ಹಾಕದಿರುವುದಕ್ಕಾಗಿ ತೆರಿಗೆ ಪಾವತಿದಾರನೋರ್ವನಿಂದ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಪ್ರತಾಪ್​ ನಗರ ಪೊಲೀಸ್ ಸ್ಟೇಷನ್​ ಮುಖ್ಯಸ್ಥ ಶ್ರೀಮೋಹನ್ ಮೆನಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.