ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಪಾಕಿಸ್ತಾನ ಆರೋಗ್ಯ ಸಚಿವ ಜಾಫರ್ ಮಿರ್ಜಾ ಹೇಳಿದ್ದಾರೆ.
-
Zafar Mirza, State Minister of Health of Pakistan: It is a matter of concern that #COVID19 has been reported from Jammu & Kashmir and in view of health emergency, it is imperative that all lockdown in the territory must be lifted immediately. pic.twitter.com/fIEoOxLbPd
— ANI (@ANI) March 15, 2020 " class="align-text-top noRightClick twitterSection" data="
">Zafar Mirza, State Minister of Health of Pakistan: It is a matter of concern that #COVID19 has been reported from Jammu & Kashmir and in view of health emergency, it is imperative that all lockdown in the territory must be lifted immediately. pic.twitter.com/fIEoOxLbPd
— ANI (@ANI) March 15, 2020Zafar Mirza, State Minister of Health of Pakistan: It is a matter of concern that #COVID19 has been reported from Jammu & Kashmir and in view of health emergency, it is imperative that all lockdown in the territory must be lifted immediately. pic.twitter.com/fIEoOxLbPd
— ANI (@ANI) March 15, 2020
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಂಟಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಇಂದು ಸಾರ್ಕ್ ದೇಶಗಳ ಮುಖ್ಯಸ್ಥರು ನಡೆಸಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಜಾಫರ್ ಮಿರ್ಜಾ, ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಭೂ ಪ್ರದೇಶದಲ್ಲಿ ವಿಧಿಸಿರುವ ನಿರ್ಬಂಧವನ್ನು ತಕ್ಷಣವೇ ತೆಗೆದುಹಾಕಬೇಕು ಎಂದಿದ್ದಾರೆ.
ನಿರ್ಬಂಧ ತೆರವಿನಿಂದ ಮಾಹಿತಿಯ ಪ್ರಸಾರಕ್ಕೆ ಅನುಕೂಲವಾಗುತ್ತದೆ, ವೈದ್ಯಕೀಯ ಸಾಮಗ್ರಿಗಳ ವಿತರಣೆಯನ್ನು ಅನುಮತಿಸುತ್ತದೆ. ಪರಿಹಾರ ಪ್ರಯತ್ನಗಳನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಭಾರತ ಸರ್ಕಾರದ ಕ್ರಮವನ್ನು ಅನುಸರಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಮಿರ್ಜಾ ಹೇಳಿದ್ದಾರೆ.