ETV Bharat / bharat

ದೆಹಲಿ ಎಲೆಕ್ಷನ್‌ಗೆ ದಿನಗಣನೆ: ಅರವಿಂದ್ ಕೇಜ್ರಿವಾಲ್ ಭರ್ಜರಿ ರೋಡ್​ ಶೋ

author img

By

Published : Jan 30, 2020, 12:08 PM IST

ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಇವತ್ತು ದೆಹಲಿಯ ತಿಮಾರ್ಪುರದಲ್ಲಿ ಇಂದು ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು.

ಅರವಿಂದ್ ಕೇಜ್ರಿವಾಲ್ ರೋಡ್​ ಶೋ
ಅರವಿಂದ್ ಕೇಜ್ರಿವಾಲ್ ರೋಡ್​ ಶೋ

ದೆಹಲಿ: ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಇಂದು ತಿಮಾರ್ಪುರದಲ್ಲಿ ಭರ್ಜರಿ ರೋಡ್​ ಶೋ ಮೂಲಕ ಮತದಾರರ ಗಮನ ಸೆಳೆಯುವ ಕಸರತ್ತು ನಡೆಸಿದರು.

ಅರವಿಂದ್ ಕೇಜ್ರಿವಾಲ್ ರೋಡ್​ ಶೋ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಸಾಕಷ್ಟು ರಂಗು ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿಯ ಅಧಿಕಾರದ ಗದ್ದುಗೆ ಪಡೆಯಲು ಬಿಜೆಪಿ, ಕಾಂಗ್ರೆಸ್‌, ಆಪ್‌ ಪಕ್ಷಗಳು ಬಿರುಸಿನ ಮತ ಪ್ರಚಾರ ನಡೆಸುತ್ತಿವೆ.

ಫೆಬ್ರವರಿ 8 ರಂದು ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಫೆ.11ಕ್ಕೆ ಫಲಿತಾಂಶ ಹೊರಬೀಳಲಿದೆ. ಚುನಾವಣೆಗೆ ಒಟ್ಟು 668 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ. ಮತದಾರರ ಅಂತಿಮ ಪಟ್ಟಿಯ ಪ್ರಕಾರ, 1.46 ಕೋಟಿಗೂ ಹೆಚ್ಚು ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.