ಚೆನ್ನೈ: ಋತುಸ್ರಾವದ ವೇಳೆ ಮಹಿಳೆಯರು ಅನುಭವಿಸುವ ಯಾತನೆ ಅವರಿಗೇ ಮಾತ್ರ ಗೊತ್ತು. ಆದ್ರೇ, ಮಹಿಳೆಯರಿಗೆ ಇನ್ಮೇಲೆ ಆ ತೊಂದರೆ ಕಡಿಮೆ ಮಾಡಲು ಹೊಸ ಸ್ಯಾನಿಟರಿ ನಾಪ್ಕಿನ್ ಆವಿಷ್ಕಾರಿಸಲಾಗಿದೆ.
ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪ್ರೀತಿ ರಾಮಡೊಸ್ ಇಂತ ನೈಸರ್ಗಿಕ ಸ್ಯಾನಿಟರಿ ಪ್ಯಾಡ್ ಆವಿಷ್ಕರಿಸಿದ್ದಾರೆ. ಮೂಲತಃ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಪ್ರೀತಿ ಸದ್ಯ ವಿಶ್ವವಿದ್ಯಾಲಯದ ಕ್ರಿಸ್ಟಲ್ ಗ್ರೌತ್ ಸೆಂಟರ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಪ್ರೀತಿ ರೂಪಿಸಿದ ಪ್ಯಾಡ್ ತುಂಬಾ ಸರಳವಾಗಿ ಒಂದೇ ತಿಂಗಳೊಳಗೆ ಕೊಳೆಯುತ್ತಂತೆ.
ಋುತುಸ್ರಾವದಲ್ಲಿ ಮಹಿಳೆಯರು ಅನುಭವಿಸುವ ಯಾತನೆ ಗೊತ್ತೇ ಇದೆ. ಸ್ವತಃ ತಾನೇ ಆ ಸಮಸ್ಯೆ ಎದುರಿಸಿದ್ದೆ. ಹಾಗಾಗಿ ತಾನು ಈ ಪ್ಯಾಡ್ ಆವಿಷ್ಕರಿಸೋದಕ್ಕೆ ಸಾಧ್ಯವಾಗಿದೆ. ಸದ್ಯ ಈಗ ಮಹಿಳೆಯರು ಬಳಸುವ ಪ್ಲಾಸ್ಟಿಕ್ ಪ್ಯಾಡ್‌ನಿಂದ ಪ್ರಕೃತಿಗೆ ಹಾನಿಯೇ ಹೆಚ್ಚು. ಅದಕ್ಕಾಗಿ ಪ್ರಕೃತಿ ಮೇಲಿನ ಕಾಳಜಿಯೂ ತನ್ನ ಸಂಶೋಧನೆಗೆ ಕಾರಣವಾಗಿದೆ ಅಂತಾರೆ ಪ್ರೀತಿ ರಾಮಡೊಸ್.
ಒಂದು ತಿಂಗಳಲ್ಲಿ ಕೊಳೆತುಬಿಡುವ ಈ ಪ್ಯಾಡ್‌ನ ಟಾಯ್ಲೆಟ್‌ನಲ್ಲೂ ಫ್ಲಷ್ ಮಾಡಬಹುದಂತೆ. ಸಾಮಾನ್ಯವಾಗಿ ಅರಿಶಿನ, ನಿಂಬೆ ಹಾಗೂ ಬೇವು ಇವುಗಳನ್ನ ಬಾಕ್ಟೀರಿ ಹರಡದಿರಲು ಬಳಸುತ್ತಾರೆ. ಪ್ರೀತಿ ಆವಿಷ್ಕಾರದ ಪ್ಯಾಡ್‌ನಲ್ಲೂ ಅರಿಶಿನ, ನಿಂಬೆ ಹಾಗೂ ಬೇವನ್ನ ಬಳಸಿಕೊಳ್ಳಲಾಗಿದೆ.