ETV Bharat / bharat

ಕೋವಿಡ್-19 ಬಿಕ್ಕಟ್ಟಿನ ನಡುವೆ ಚುನಾವಣೆಗೆ ಜಗನ್ ಪ್ಲಾನ್... ಚಂದ್ರಬಾಬು ನಾಯ್ಡು ಆಕ್ಷೇಪ - ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್​ ಮೋಹನ್ ರೆಡ್ಡಿ

ಲಾಕ್​ಡೌನ್​ ತೆರವುಮಾಡಿ ಆದಷ್ಟು ಬೇಗ ಚುನಾವಣೆ ನಡೆಸಲು ವೈಎಸ್​ಆರ್​ ನಾಯಕರು ಮುಂದಾಗುತ್ತಿದ್ದಾರೆ. ಜನರ ಜೀವದ ಬಗ್ಗೆ ಅವರಿಗೆ ಚಿಂತೆ ಇಲ್ಲವೆಂದು ಟಿಡಿಪಿ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Chandrababu objects to AP govt move to hold local body polls amid COVID-19 crisis
ಚಂದ್ರಬಾಬು ನಾಯ್ಡು ಆಕ್ಷೇಪ
author img

By

Published : Apr 19, 2020, 11:03 AM IST

ಅಮರಾವತಿ(ಆಂಧ್ರ ಪ್ರದೇಶ): ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೊಸ ವೇಳಾಪಟ್ಟಿ ಕುರಿತು ಚರ್ಚಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್​ ಮೋಹನ್ ರೆಡ್ಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಕ್ಕೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಆಂಧ್ರ ಪ್ರದೇಶ ರಾಜ್ಯ ಚುನಾವಣಾ ಆಯೋಗ, ಕೊರೊನಾ ಭೀತಿಯಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆರು ವಾರಗಳವರೆಗೆ ಮುಂದೂಡಿತ್ತು. ಅಲ್ಲದೆ ಚುನಾವಣಾ ದಿನಾಂಕ ಘೋಷಿಸಿದಾಗಿನಿಂದ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಆದರೆ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಕ್ರಮವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

ಕೊರೊನಾ ವೈರಸ್​ನ ಕೆಟ್ಟ ಪರಿಣಾಮಗಳನ್ನು ತಗ್ಗಿಸಲು ಇಡೀ ಜಗತ್ತು ಹೋರಾಡುತ್ತಿರುವಾಗ ವೈಎಸ್​​ಆರ್ ಕಾಂಗ್ರೆಸ್​​ ಪಕ್ಷ​ ಚುನಾವಣೆ ನಡೆಸಲು ಯೋಚಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ. ರಾಜಕೀಯ ಲಾಭಕ್ಕಾಗಿ ಸಿಎಂ ಜಗನ್, ಲಕ್ಷಾಂತರ ಜನರ ಆರೋಗ್ಯಕ್ಕೆ ಅಪಾಯ ಉಂಟುಮಾಡಲು ಸಿದ್ಧರಾಗಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.

ಲಾಕ್​ಡೌನ್​ ತೆರವುಮಾಡಿ ಆದಷ್ಟು ಬೇಗ ಚುನಾವಣೆ ನಡೆಸಲು ವೈಎಸ್​ಆರ್​ ನಾಯಕರು ಮುಂದಾಗುತ್ತಿದ್ದಾರೆ. ಜನರ ಜೀವದ ಬಗ್ಗೆ ಅವರಿಗೆ ಚಿಂತೆ ಇಲ್ಲ ಎಂದು ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.