ETV Bharat / bharat

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಆಯುಷ್‌ನ ಮಹತ್ವವನ್ನು ಪುನರುಚ್ಛರಿಸಿದ ಕೇಂದ್ರ.. - 'ಆಯುಷ್ ಸಂಜೀವನಿ' ಆ್ಯಪ್

ಆಯುರ್ವೇದ ವಿಧಾನದ ಮೂಲಕ ಕೋವಿಡ್-19 ರೋಗಿಯ ಆರೈಕೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ ಕುರಿತು ಈ ಆಯುಷ್ ಅಧ್ಯಯನಗಳು ಒಳಗೊಂಡಿವೆ. ಸಿಎಸ್ಐಆರ್, ಐಸಿಎಂಆರ್ ಮತ್ತು ಡಿಸಿಜಿಐಗಳ ಸಹಾಯದಿಂದ ಆಯುಷ್​ನ ಮಹತ್ವವನ್ನು ಅಧ್ಯಯನಗಳು ತಿಳಿಸಲಿವೆ ಎಂದರು.

ayush
ayush
author img

By

Published : May 8, 2020, 9:47 AM IST

ನವದೆಹಲಿ : ಕೋವಿಡ್-19 ವಿರುದ್ಧ ಭಾರತದ ಹೋರಾಟದಲ್ಲಿ ಆಯುಷ್ ಮಹತ್ವದ ಪಾತ್ರ ವಹಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೋವಿಡ್-19 ಪರಿಸ್ಥಿತಿಗೆ ಸಂಬಂಧಿಸಿದ 'ಆಯುಷ್ ಸಂಜೀವಿನಿ' ಆ್ಯಪ್ ಮತ್ತು ಆಯುಷ್ ಆಧಾರಿತ ಅಧ್ಯಯನಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಉದ್ಘಾಟಿಸಿದರು. 'ಕೊರೊನಾ ತಡೆಗಟ್ಟುವಲ್ಲಿ ಆಯುಷ್ ಪದ್ಧತಿಯ ಬಳಕೆ ಹಾಗೂ ಅದರ ಪ್ರಭಾವದ ಬಗ್ಗೆ ಡಾಟಾ ಸೃಷ್ಟಿಸಲು ಈ ಅಪ್ಲಿಕೇಶನ್ ಸಹಾಯ ಮಾಡಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಆಯುಷ್ ಈ ಆ್ಯಪ್​ಗಾಗಿ ಜೊತೆಗೂಡಿದೆ' ಎಂದು ಡಾ.ಹರ್ಷವರ್ಧನ್ ಹೇಳಿದರು.

ಆಯುರ್ವೇದ ವಿಧಾನದ ಮೂಲಕ ಕೋವಿಡ್-19 ರೋಗಿಯ ಆರೈಕೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ ಕುರಿತು ಈ ಆಯುಷ್ ಅಧ್ಯಯನಗಳು ಒಳಗೊಂಡಿವೆ. ಸಿಎಸ್ಐಆರ್, ಐಸಿಎಂಆರ್ ಮತ್ತು ಡಿಸಿಜಿಐಗಳ ಸಹಾಯದಿಂದ ಆಯುಷ್​ನ ಮಹತ್ವವನ್ನು ಅಧ್ಯಯನಗಳು ತಿಳಿಸಲಿವೆ ಎಂದರು.

ಕೋವಿಡ್-19ಗೆ ಪ್ರತಿಯಾಗಿ ಆಯುರ್ವೇದ ಔಷಧಿಗಳ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.