ಜೋಧ್ಪುರ: ಭಾರತ ಮತ್ತು ಫ್ರಾನ್ಸ್‌ನ ವಾಯುಪಡೆಯ ಜಂಟಿ ಸಮರಾಭ್ಯಾಸ 'ಡೆಸರ್ಟ್ ನೈಟ್ -21' ಜೋಧ್ಪುರ ವಾಯುನೆಲೆಯಲ್ಲಿ ನಡೆಯುತ್ತಿದೆ. ಇದರ ಅಡಿಯಲ್ಲಿ ಭಾರತ ಮತ್ತು ಫ್ರಾನ್ಸ್‌ನ ರಫೇಲ್ ಯುದ್ಧ ವಿಮಾನ ಸೇರಿ ಇತರ ಯುದ್ಧ ವಿಮಾನಗಳು ಬಾನಂಗಳದಲ್ಲಿ ಅಭ್ಯಾಸ ಮಾಡುತ್ತಿದೆ.
ರಫೇಲ್ ಹಾರಾಟ ಪಶ್ಚಿಮ ಗಡಿಯವರೆಗೂ ಮುಂದುವರಿದಿದೆ. ಪೋಖ್ರಾನ್ ಮತ್ತು ಚಂದನ್ ಕ್ಷಿಪಣಿ ಮೂಲಕ ಡಮ್ಮಿ ಗುಂಡುಗಳನ್ನು ಹಾರಿಸಿ ಅಭ್ಯಾಸ ನಡೆಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಜೋಧ್ಪುರಕ್ಕೆ ತಲುಪಿದ್ದಾರೆ.
ಮೂರು ಸೈನ್ಯಗಳ ಜನರಲ್ ಜನರಲ್ ಬಿಪಿನ್ ರಾವತ್ ಅವರು ಈ ಅಭ್ಯಾಸದ ಬಗ್ಗೆ ಭಾರತ ಮತ್ತು ಫ್ರಾನ್ಸ್‌ನ ವಾಯುಪಡೆಯ ಪೈಲಟ್‌ಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಇನ್ನು ಈ ವೇಳೆ, ರಾವತ್ ಸಹ ರಫೇಲ್‌ನಲ್ಲಿ ಹಾರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಉಭಯ ದೇಶಗಳ ಸೇನೆಗಳ ನಡುವಿನ ಈ ವ್ಯಾಯಾಮ ಜನವರಿ 24 ರವರೆಗೆ ನಡೆಯಲಿದೆ. ಈ ಅಭ್ಯಾಸದಲ್ಲಿ 175 ಫ್ರೆಂಚ್ ಸೈನಿಕರು ಭಾಗವಹಿಸುತ್ತಿದ್ದಾರೆ.