ಜೌನ್‌ಪುರ(ಉತ್ತರ ಪ್ರದೇಶ): ನಾವು ಸಂವಿಧಾನದ ವಿಧಿ 370 ಅನ್ನು ಮರುಸ್ಥಾಪಿಸುತ್ತೇವೆ ಮತ್ತು ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ಇದ್ದ ರಾಜ್ಯ ಧ್ವಜವನ್ನು ಮರಳಿ ಅಧಿಕೃತಗೊಳಿಸುವವರೆಗೂ ರಾಷ್ಟ್ರಧ್ವಜ ಹಾರಿಸುವುದಿಲ್ಲ ಎಂದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಿರುದ್ಧ ಜೌನ್‌ಪುರ ಜಿಲ್ಲೆಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೆಹಬೂಬಾ ಮುಫ್ತಿ ದೇಶದ್ರೋಹ ಮತ್ತು ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಕೀಲ ಹಿಮಾಂಶು ಶ್ರೀವಾಸ್ತವ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ನವೆಂಬರ್ 27 ರಂದು ವಿಚಾರಣೆ ನಡೆಯಲಿದೆ.