ETV Bharat / bharat

ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ಕಾರ್ಯಾಚರಣೆ: ಶಸ್ತ್ರಾಸ್ತ್ರಗಳ ಜೊತೆ ಮದ್ದು-ಗುಂಡು ವಶಕ್ಕೆ - ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಇಂಡೋ-ಪಾಕ್ ಗಡಿ

ಗಡಿ ಭದ್ರತಾ ಪಡೆ ಇಂದು ಫಿರೋಜ್‌ಪುರ ಜಿಲ್ಲೆಯ ಇಂಡೋ-ಪಾಕ್ ಗಡಿಯಲ್ಲಿರುವ ಮೈದಾನದಲ್ಲಿ ಕಾರ್ಯಾಚರಣೆ ನಡೆಸಿ ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಂಡಿದೆ.

Bsf
Bsf
author img

By

Published : Sep 12, 2020, 1:32 PM IST

ಪಂಜಾಬ್: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಇಂಡೋ-ಪಾಕ್ ಗಡಿಯಲ್ಲಿರುವ ಮೈದಾನದಲ್ಲಿ ಮೂರು ಎಕೆ-47 ಮತ್ತು ಎರಡು ಎಂ-16 ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ.

ಖಚಿತ ಮಾಹಿತಿ ಮೇರೆಗೆ ಇಂದು ಬಿಎಸ್ಎಫ್ ತಂಡವು ಫಿರೋಜ್‌ಪುರದ ಇಂಡೋ-ಪಾಕ್ ಗಡಿ ಬಳಿ ದಾಳಿ ನಡೆಸಿತ್ತು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಶೋಧ ಕಾರ್ಯಾಚರಣೆ ನಡೆಸಿ ಗಡಿಯ ಸಮೀಪದ ಮೈದಾನದಲ್ಲಿ ಬಿದ್ದಿದ್ದ ಚೀಲದಿಂದ ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕಾರ್ಯಾಚರಣೆ ವೇಳೆ ಮೂರು ಎಕೆ-47, ಎರಡು ಎಂ-16 ರೈಫಲ್‌ಗಳು ಮತ್ತು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.