ಮುಂಬೈ: ಇಂದು ಮಹಾರಾಷ್ಟ್ರ ದಿನಾಚರಣೆ ಇರುವುದರಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ಭಾರತದ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (NSE) ಮುಚ್ಚಲಾಯಿತು.
ಮೇ 1 ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಹಿನ್ನೆಲೆ ಲೋಹ ಮತ್ತು ಬೆಳ್ಳಿ ಸೇರಿದಂತೆ ಸಗಟು ಸರಕು ಮಾರುಕಟ್ಟೆಗಳನ್ನೂ ಮುಚ್ಚಲಾಯಿತು. ವಿದೇಶಿ ವಿನಿಮಯ ಮತ್ತು ಸರಕು ಸಾಗಾಣಿಕೆ ಮಾರುಕಟ್ಟೆಗಳಲ್ಲಿ ಯಾವುದೇ ವ್ಯಾಪಾರ, ವಹಿವಾಟು ಇರಲಿಲ್ಲ. ಒಂದು ದಿನದ ಹಿಂದೆ ಷೇರು ಮಾರುಕಟ್ಟೆ ಸತತ ನಾಲ್ಕು ದಿನವೂ ಬಿಎಸ್ಇಎಸ್ ಅಂಡ್ ಪಿ ಸೆನ್ಸೆಕ್ಸ್ 997 ಪಾಯಿಂಟ್ ಅಥವಾ 3.05ರಷ್ಟು ಏರಿಕೆ ಕಂಡು 33,718ಕ್ಕೆ ತಲುಪಿದ್ರೆ, ನಿಫ್ಟಿ 50,307 ಪಾಯಿಂಟ್ ಅಥವಾ 3.21ರಷ್ಟು ಏರಿಕೆ ಕಂಡು 9,860ಕ್ಕೆ ತಲುಪಿದೆ.
ರೆಮ್ಡೆಸಿವಿರ್( remdesivir) ಔಷಧದ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಿದ್ದರಿಂದ ಜಾಗತಿಕ ಮಟ್ಟದಲ್ಲಿ ಸೂಚ್ಯಂಕ ಏರಿಕೆ ಕಂಡಿದೆ. ಈ ಔಷಧವನ್ನು ಕೋವಿಡ್-19 ರೋಗಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿರೋದರಿಂದ ಏರಿಕೆ ಕಂಡಿದೆ. ಡೌ ಜೋನ್ಸ್ ಕೈಗಾರಿಕಾ ಸರಾಸರಿ 288 ಪಾಯಿಂಟ್ ಅಥವಾ 1.17ರಷ್ಟು ಇಳಿದಿದ್ದು, 24,346ಕ್ಕೆ ತಲುಪಿದೆ. ಎಸ್ ಅಂಡ್ ಪಿ 50,027 ಪಾಯಿಂಟ್ ಅಥವಾ 0.92ರಷ್ಟು ಇಳಿಕೆಯಾಗಿ 2,912ಕ್ಕೆ ತಲುಪಿದೆ. ನಾಸ್ಡಾಕ್ ಕಾಂಪೋಸಿಟ್ 25 ಪಾಯಿಂಟ್ ಅಥವಾ 0.28 ಶೇಕಡಾ ಇಳಿದು 8,890ಕ್ಕೆ ತಲುಪಿದೆ.