ಮುಂಬೈ (ಮಹಾರಾಷ್ಟ್ರ): ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ತನ್ನ ಕ್ಯಾಂಟೀನ್‌ನಲ್ಲಿ ನೌಕರರಿಗಾಗಿ 10 ರೂ.ಗೆ ಊಟ ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು ಬಿಎಂಸಿ ಮೇಯರ್ ಕಿಶೋರಿ ಪೆಡ್ನೆಕರ್ ಡಿ.19 ರಂದು ಉದ್ಘಾಟಿಸಿದ್ದಾರೆ.
ಈ ಊಟವು ಎರಡು ಚಪಾತಿಗಳು, ಅನ್ನ, ದಾಲ್ ಮತ್ತು ಎರಡು ತರಕಾರಿ ಖಾದ್ಯಗಳನ್ನು ಒಳಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೆಡ್ನೆಕರ್, 10 ರೂ.ಗೆ ಊಟ, ಇದು ಯೋಜನೆ ಶಿವಸೇನೆಯ ಪ್ರಣಾಳಿಕೆಯ ಒಂದು ಭಾಗವಾಗಿದ್ದು, ಇಲ್ಲಿ ನಾವು ಮೊದಲು ಪ್ರಾರಂಭಿಸಿದ್ದೇವೆ. ಈ ಯೋಜನೆಯನ್ನು ಶೀಘ್ರದಲ್ಲೇ ಸಾಮಾನ್ಯ ಜನರಿಗೂ ಪರಿಚಯಿಸಲಾಗುವುದು ಎಂದು ತಿಳಿಸಿದರು.
"ಎಲ್ಲರೂ ಇಲ್ಲಿಗೆ ಬಂದು 10 ರೂ. ಊಟವನ್ನು ಸೇವಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ" ಎಂದು ಕ್ಯಾಂಟೀನ್‌ನ ಮಾಲೀಕರಾದ ಸವಿತಾ ಪಾಲ್ಕರ್ ಹೇಳಿದ್ದಾರೆ.
-
Maharashtra: BrihanMumbai Municipal Corporation (BMC) introduced Rs 10 meal (thali) for its employees at their canteen, on December 19. The meal includes two chapatis, rice, dal, and two vegetables. pic.twitter.com/JEHpM3sH0f
— ANI (@ANI) December 20, 2019 " class="align-text-top noRightClick twitterSection" data="
">Maharashtra: BrihanMumbai Municipal Corporation (BMC) introduced Rs 10 meal (thali) for its employees at their canteen, on December 19. The meal includes two chapatis, rice, dal, and two vegetables. pic.twitter.com/JEHpM3sH0f
— ANI (@ANI) December 20, 2019Maharashtra: BrihanMumbai Municipal Corporation (BMC) introduced Rs 10 meal (thali) for its employees at their canteen, on December 19. The meal includes two chapatis, rice, dal, and two vegetables. pic.twitter.com/JEHpM3sH0f
— ANI (@ANI) December 20, 2019
ಮಹಾರಾಷ್ಟ್ರದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಒಕ್ಕೂಟವಾದ ‘ಮಹಾ ವಿಕಾಸ ಅಘಾಡಿ’ಯ 'ಸಾಮಾನ್ಯ ಕನಿಷ್ಠ ಕಾರ್ಯಕ್ರಮ' (CMP-Common Minimum Program), ರಾಜ್ಯದ ಸಾಮಾನ್ಯ ಜನರಿಗೆ 10 ರೂ.ಗೆ ಆಹಾರವನ್ನು ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಇದೀಗ ಮೊದಲು ಬಿಎಂಸಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಂತಾಗಿದೆ.