ಗಡ್ಚಿರೋಲಿ: ಮಹಾರಾಷ್ಟ್ರದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇದರ ಮಧ್ಯೆ ಗಡ್ಚಿರೋಲಿಯ ಮತದಾನ ಕೇಂದ್ರದ ಬಳಿ ಬಾಂಬ್ ಸ್ಫೋಟಗೊಂಡ ಪರಿಣಾಮ ಯೋಧ ಗಾಯಗೊಂಡಿದ್ದಾನೆ.
-
Maharashtra: Voting underway at a polling booth in Allapalli village, in Gadchiroli #LokSabhaElections2019 pic.twitter.com/6kImZ8kwPl
— ANI (@ANI) April 11, 2019 " class="align-text-top noRightClick twitterSection" data="
">Maharashtra: Voting underway at a polling booth in Allapalli village, in Gadchiroli #LokSabhaElections2019 pic.twitter.com/6kImZ8kwPl
— ANI (@ANI) April 11, 2019Maharashtra: Voting underway at a polling booth in Allapalli village, in Gadchiroli #LokSabhaElections2019 pic.twitter.com/6kImZ8kwPl
— ANI (@ANI) April 11, 2019
ನಕ್ಸಲ್ ಪೀಡಿತ ಜಿಲ್ಲೆಯಾಗಿರುವ ಗಡ್ಚಿರೋಲಿಯಲ್ಲಿ ಸಾಕಷ್ಟು ಯೋಧರನ್ನು ನಿಯೋಜಿಸಲಾಗಿದೆ. ಈ ಪೈಕಿ ಗಟ್ಟ ಎಟ್ಟಪಲ್ಲಿಯಲ್ಲಿ 191 ಅರೆಸೇನಾ ಯೋಧರನ್ನು ನಿಯೋಜಿಸಲಾಗಿತ್ತು. ಬಾಂಬ್ ಸ್ಫೋಟಗೊಂಡ ಕೂಡಲೇ ಜನರು ಚೆಲ್ಲಾಪಿಲ್ಲಿಯಾಗಿದ್ದು, ಸ್ಫೋಟ ಸ್ಥಳದ ಸಮೀಪವೇ ಇದ್ದ ಸಿಆರ್ಪಿಎಫ್ ಯೋಧ ಗಾಯಗೊಂಡಿದ್ದಾನೆ.
ಯೋಧನ ಮಂಡಿಗೆ ಗಾಯವಾಗಿದ್ದು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.