ETV Bharat / bharat

ಬಿಜೆಪಿ ಪ್ರಣಾಳಿಕೆಯಲ್ಲಿ ಮತ್ತೆ ಕೋವಿಡ್ ಲಸಿಕೆ: ಇಲ್ಲಿದೆ ಭರವಸೆಗಳ ಸಂಪೂರ್ಣ ಪಟ್ಟಿ

author img

By

Published : Nov 26, 2020, 5:11 PM IST

ಹೈದರಾಬಾದ್​ನಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ಪ್ರಣಾಳಿಕೆಯನ್ನು ಘೋಷಣೆ ಮಾಡಿದೆ.

BJP manifesto
ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ (ಜಿಹೆಚ್ಎಂಸಿ)​ ಚುನಾವಣೆ ಘೋಷಣೆ ಆಗಿದ್ದು, ಭಾರತೀಯ ಜನತಾ ಪಾರ್ಟಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿದೆ. ಕೇಂದ್ರ ಸರ್ಕಾರದ ಷರತ್ತುಗಳ ಪ್ರಕಾರ ಎಲ್ಲರಿಗೂ ಕೊರೊನಾ ಲಸಿಕೆ ಮತ್ತು ಪರೀಕ್ಷೆ ಮಾಡಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ..

ಡಿಸೆಂಬರ್ 1ರಂದು ಚುನಾವಣೆಗಳು ನಡೆಯಲಿದ್ದು, ಹೈದರಾಬಾದ್​ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಜಾರಿಗೆ ತಂದಿರುವ ಲ್ಯಾಂಡ್ ರೆಗ್ಯುಲೇಷನ್ ಸ್ಕೀಮ್ ಅನ್ನು ತೆಗೆದುಹಾಕುವುದಾಗಿ ಬಿಜೆಪಿ ಘೋಷಿಸಿದೆ. ಇದರಿಂದ ಹೈದರಾಬಾದ್ ಜನತೆಗೆ ಸಾಕಷ್ಟು ನಷ್ಟವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇದರ ಜೊತೆಗೆ ಇನ್ನೂ ಹಲವಾರು ಘೋಷಣೆಗಳನ್ನು ಬಿಜೆಪಿ ಘೋಷಿಸಿದೆ. ಅವುಗಳೆಂದರೆ

  • ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ 25 ಸಾವಿರ ರೂಪಾಯಿ ಪರಿಹಾರ
  • ಮೆಟ್ರೋ ಹಾಗೂ ನಗರ ಸಾರಿಗೆ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
  • ಬಡಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್​ಗಳ ವಿತರಣೆ ಹಾಗೂ ವೈಫೈ
  • ಪರಿಶಿಷ್ಠ ಜಾತಿ ಕಾಲೋನಿ ಹಾಗೂ ಕೊಳಗೇರಿಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ
  • 125 ಯಾರ್ಡ್​ಗಳ ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಸರ್ಕಾರದಿಂದ ಉಚಿತ ಅನುಮತಿ
  • ಹೈದರಾಬಾದ್​​ನ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ಉಚಿತ ಸರಬರಾಜು
  • 100 ಯುನಿಟ್​​ಗಳಿಗಿಂತ ಕಡಿಮೆ ವಿದ್ಯುತ್ ಬಳಕೆಗೆ ಯಾವುದೇ ಶುಲ್ಕವಿಲ್ಲ
  • ಸಾಂಪ್ರದಾಯಿಕ ವೃತ್ತಿಗಳಿಗೆ ಉಚಿತ ವಿದ್ಯುತ್ ಪೂರೈಕೆ ಭರವಸೆ
  • ಮೂಸಿ ನದಿಯ ಪುನರುಜ್ಜೀವನ ಮತ್ತು ಅಭಿವೃದ್ಧಿ ಮಾಡುವ ಭರವಸೆ
  • ನಾಲೆಗಳು ಹಾಗೂ ಕೆರೆಗಳ ಒತ್ತುವರಿ ತಡೆಯಲು ಸುಮೇದ ಕಾಯ್ದೆ ಜಾರಿ
  • ನಾಲೆಗಳು ಹಾಗೂ ಒಳಚರಂಡಿ ಅಭಿವೃದ್ಧಿಗಾಗಿ ಬಜೆಟ್​ನಲ್ಲಿ 10 ಸಾವಿರ ಕೋಟಿ
  • ಹೈದರಾಬಾದ್​ನ ಓಲ್ಡ್ ಸಿಟಿ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ
  • ಓಲ್ಡ್ ಸಿಟಿ ಅಭಿವೃದ್ಧಿಗಾಗಿ ಪ್ರತಿ ವಿಭಾಗಕ್ಕೆ 4 ಕೋಟಿ ರೂ. ಅನುದಾನ
  • ಹೀಗೆ ಹಲವು ಭರವಸೆಗಳನ್ನ ಮತದಾರರಿಗೆ ನೀಡಲಾಗಿದೆ. ಟಿಆರ್​ಎಸ್ ಸಹ ಚುನಾವಣೆ ಗೆಲ್ಲಲು ಮತದಾರರಿಗೆ ನಾನಾ ಭರವಸೆ ನೀಡಿ ಪ್ರಣಾಳಿಕೆ ಈಗಾಗಲೇ ಬಿಡುಗಡೆ ಮಾಡಿದೆ. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.