ಷಹಜಾನಪುರ(ಉತ್ತರ ಪ್ರದೇಶ):ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಡಿ ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಸ್ವಾಮಿಯನ್ನು ಸ್ಥಳೀಯ ಪೊಲೀಸ್ ಸಹಯೋಗದೊಂದಿಗೆ ಎಸ್‌ಐಟಿ ಬಂಧಿಸಿದೆ. ಅವರನ್ನು ಆಶ್ರಮದಿಂದ ಬಂಧಿಸಿ ಚೌಕ್ ಕೊತ್ವಾಲ್ಗೆ ಕರೆತರಲಾಗಿದೆ.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಚಿನ್ಮಯಾನಂದ ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಯುರ್ವೇದ ವಿಧಾನದಿಂದ ಚಿಕಿತ್ಸೆ ನೀಡುವುದಾಗಿ ಹೇಳಿ ಜಿಲ್ಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಳ್ಳಲಾಗಿತ್ತು.