ETV Bharat / bharat

ತಲಾಖ್​ ನೀಡಿ ಹೆಂಡತಿ ಮೇಲೆ ಮಂತ್ರವಾದಿ ಜತೆ ಸೇರಿ ಅತ್ಯಾಚಾರ ಮಾಡಿದ ಪಾಪಿ ಗಂಡ! - ತಲಾಖ್ ನೀಡಿ ಮರುಮದುವೆ ನೆಪ

ತ್ರಿವಳಿ​ ತಲಾಖ್​ ನೀಡಿದ್ದ ಹೆಂಡತಿಯನ್ನ ಮರು ಮದುವೆಯಾಗುವುದಾಗಿ ನಂಬಿಸಿ ಮಂತ್ರವಾದಿ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

A 21-year-old woman was allegedly given triple talaq
ಸಾಂದರ್ಭಿಕ ಚಿತ್ರ
author img

By

Published : Dec 12, 2019, 7:33 PM IST

ಭೋಪಾಲ್​​: ಕಳೆದ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದ 21 ವರ್ಷದ ಯುವತಿ ಮೇಲೆ ಮಂತ್ರವಾದಿ ಜತೆ ಸೇರಿ ಪಾಪಿ ಗಂಡ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದ್ದು, ಇದೀಗ ಆರೋಪಿಗಳ ಬಂಧನ ಮಾಡಲಾಗಿದೆ.

ಗಂಡ-ಹೆಂಡತಿ ನಡುವೆ ಕಳೆದ ನವೆಂಬರ್​​​ 23ರಂದು ಜಗಳವಾಗಿದ್ದು, ಆಕೆಗೆ ತ್ರಿವಳಿ​ ತಲಾಖ್​ ನೀಡಿ ಮನೆಯಿಂದ ಹೊರಹಾಕಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಮನಸ್ಸು ಬದಲಿಸಿಕೊಂಡ ಆಕೆಯ ಗಂಡ ಪುನರ್​ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನ ವಾಪಸ್​ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ತಾವು ಮತ್ತೊಮ್ಮೆ ಮದುವೆಯಾಗುವುದಾಗಿ ಮಂತ್ರವಾದಿ ಹತ್ತಿರ ಹೋಗಿ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಮಂತ್ರವಾದಿ ಈ ಮದುವೆಯಾಗುವುದಕ್ಕೂ ಮುಂಚಿತವಾಗಿ ಯುವತಿ ಬೇರೆ ವ್ಯಕ್ತಿ ಜತೆ ಮದುವೆಯಾಗಬೇಕು ಎಂದು ಸಲಹೆ ನೀಡಿ, ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯ ಮೇಲೆ ಗಂಡನೊಂದಿಗೆ ಸೇರಿ ಅತ್ಯಾಚಾರ ನಡೆಸಿದ್ದಾನೆ. 50 ವರ್ಷದ ಅನ್ವರ್​ ಬಾಬಾ ಈ ಹಿಂದೆ ಇವರಿಬ್ಬರಿಗೂ ಮದುವೆ ಮಾಡಿಸಿದ್ದ ವ್ಯಕ್ತಿ ಸಹ ಆಗಿದ್ದನು. ಇದಾದ ಬಳಿಕ ಆಕೆ ವಾಪಸ್​ ಮನೆಗೆ ಬಂದಾಗ ಮದುವೆಯಾಗಲು ನಿರಾಕರಿಸಿ ಮತ್ತೊಮ್ಮೆ ಅತ್ಯಾಚಾರ ನಡೆಸಿದ್ದಾನೆ.

ಈ ಘಟನೆ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ ಇಬ್ಬರ ಮೇಲೂ ಮದುವೆ ಮೇಲಿನ ಹಕ್ಕುಗಳ ರಕ್ಷಣೆ ಕಾಯ್ದೆ, ತ್ರಿವಳಿ​ ತಲಾಖ್​ ರದ್ದು​ ಅಡಿಯಲ್ಲಿ ದೂರು ದಾಖಲು ಮಾಡಿಕೊಂಡಿದ್ದಾರೆ.

Intro:Body:

ತ್ರಿಬಲ್ ತಲಾಖ್​ ನೀಡಿ ಹೆಂಡ್ತಿ ಮೇಲೆ ಮಂತ್ರವಾದಿ ಜತೆ ಸೇರಿ ಅತ್ಯಾಚಾರ ಮಾಡಿದ ಪಾಪಿ ಗಂಡ! 

ಭೋಪಾಲ್​​: ಕಳೆದ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದ 21 ವರ್ಷದ ಯುವತಿ ಮೇಲೆ ಮಂತ್ರವಾದಿ ಜತೆ ಸೇರಿ ಪಾಪಿ ಗಂಡ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದ್ದು, ಇದೀಗ ಆರೋಪಿಗಳ ಬಂಧನ ಮಾಡಲಾಗಿದೆ. 

ಗಂಡ-ಹೆಂಡತಿ ನಡುವೆ ಕಳೆದ ನವೆಂಬರ್​​​ 23ರಂದು ಜಗಳವಾಗಿದ್ದು, ಆಕೆಗೆ ತ್ರಿಬಲ್​ ತಲಾಖ್​ ನೀಡಿ ಮನೆಯಿಂದ ಹೊರಹಾಕಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಮನಸ್ಸು ಬದಲಿಸಿದ ಆಕೆಯ ಗಂಡ ಪುನರ್​ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನ ವಾಪಸ್​ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ತಾವು ಮತ್ತೊಮ್ಮೆ ಮದುವೆಯಾಗುವುದಾಗಿ ಮಂತ್ರವಾದಿ ಹತ್ತಿರ ಹೋಗಿ ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆತ ಈ ಮದುವೆಯಾಗುವುದಕ್ಕೂ ಮುಂಚಿತವಾಗಿ ಆಕೆ ಬೇರೆ ವ್ಯಕ್ತಿ ಜತೆ ಮದುವೆಯಾಗಬೇಕು ಎಂದು ಸಲಹೆ ನೀಡಿ, ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. 50 ವರ್ಷದ ಅನ್ವರ್​ ಬಾಬಾ ಈ ಹಿಂದೆ ಇವರಿಬ್ಬರಿಗೂ ಮದುವೆ ಮಾಡಿಸಿದ್ದ ವ್ಯಕ್ತಿ ಸಹ ಆಗಿದ್ದನು. ಇದಾದ ಬಳಿಕ ಆಕೆ ವಾಪಸ್​ ಮನೆಗೆ ಬಂದಾಗ ಮದುವೆಯಾಗಲು ನಿರಾಕರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. 

ಈ ಘಟನೆ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ ಇಬ್ಬರ ಮೇಲೂ ಮದುವೆ ಮೇಲಿನ ಹಕ್ಕುಗಳ ರಕ್ಷಣೆ ಕಾಯ್ದೆ, ತ್ರಿಬಲ್​ ತಲಾಖ್​ ಬ್ಯಾನ್​ ಅಡಿಯಲ್ಲಿ ದೂರು ದಾಖಲು ಮಾಡಿಕೊಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.