ನವದೆಹಲಿ: ಅಯೋಧ್ಯೆ ವಿವಾದದ ಸಂಬಂಧ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಧ್ಯವರ್ತಿ ಸಮಿತಿಯ ಬೇಡಿಕೆಯಂತೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಿದೆ.
ಅಯೋಧ್ಯೆ ಪ್ರಕರಣ ವಿಚಾರವಾಗಿ ಇಂದು ಸಿಜೆಐ ರಂಜನ್ ಗೊಗೊಯಿ ಅವರ ನೇತೃತ್ವದಲ್ಲಿ ನ್ಯಾ. ಎಸ್ಎ ಬೊಬ್ಡೆ, ನ್ಯಾ. ಎಸ್ಎ ನಜೀರ್, ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ ಡಿ.ವೈ ಚಂದ್ರಚೂಡ್ ಅವರ ಪಂಚ ಸದಸ್ಯ ಪೀಠ ವಿಚಾರಣೆ ನಡೆಸಿತು.
ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಎಫ್.ಎಂ ಖಲೀಫುಲ್ಲಾ, ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಅವರ ಸಮಿತಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಮತ್ತಷ್ಟು ಸಮಯಾವಕಾಶ ಬೇಕು ಎಂದು ಮನವಿ ಮಾಡಿತು. ಅದರಂತೆ ಪೀಠವು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಿದೆ. ವಿಚಾರಣೆ ವೇಳೆ ಸಿಜೆಐ ರಂಜನ್ ಗೊಗೊಯಿ ಅವರು, ಈ ವಿಚಾರವಾಗಿ ನಾವು ಈಗಲೇ ಏನನ್ನೂ ಹೇಳಲಾಗದು. ಅದೆಲ್ಲವೂ ಗೌಪ್ಯವಾಗಿರಲಿದೆ ಎಂದು ಹೇಳಿದರು.