ನವದೆಹಲಿ: ಅಯೋಧ್ಯೆಯ ರಾಮಮಂದಿರ ಭೂವಿವಾದದ ಕುರಿತು ಆಗಸ್ಟ್ 2ರಿಂದ ತೆರೆದ ಕೋರ್ಟ್ನಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಭೂವಿವಾದ ಸಂಬಂಧ ರಚಿಸಲಾಗಿದ್ದ ಮೂವರು ಸದಸ್ಯರ ಸಂಧಾನ ಸಮಿತಿಯು ವಸ್ತು ಸ್ಥಿತಿ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಬೆನ್ನಿಗೇ ಈ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯವು ಪ್ರಕಟಿಸಿದೆ.
![ayodhya-case](https://etvbharatimages.akamaized.net/etvbharat/prod-images/3872499_thumb.jpg)
ಮಧ್ಯಸ್ಥಿಕೆ ಸಮಿತಿಯು ಜುಲೈ 31ರವರೆಗೆ ತನ್ನ ಸಂಧಾನ ಪ್ರಕ್ರಿಯೆಗಳನ್ನು ಮುಂದುವರಿಸಲಿದೆ. ಕೋರ್ಟ್ ತನ್ನ ಮುಂದಿನ ಆದೇಶವನ್ನು ಆಗಸ್ಟ್ 2ರಂದು ಪ್ರಕಟಿಸಲಿದೆ ಎಂದು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಿಳಿಸಿದರು.
ಮಧ್ಯಸ್ಥಿಕೆ ಸಮಿತಿಯ ಅಧ್ಯಕ್ಷರಾದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ, ನ್ಯಾಯಮೂರ್ತಿ (ನಿವೃತ್ತ) ಎಫ್‌ಎಂಐ ಕಲಿಫುಲ್ಲಾ ಅವರನ್ನು ನ್ಯಾಯಪೀಠವು ಇಂದು ವಸ್ತು ಸ್ಥಿತಿ ವರದಿಯನ್ನು ಕೋರ್ಟ್ಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು.