ಗುಂಟೂರು (ಆಂಧ್ರ ಪ್ರದೇಶ): ತನ್ನ ಅಕ್ಕನ ಮಗನ ಹೊಟ್ಟೆ ಬಗೆದ ಮಹಿಳೆವೋರ್ವಳು ಬಾಲಕನ ರಕ್ತ ಕುಡಿದು, ಹೃದಯ ಹೊರತೆಗೆದಿರುವ ರಾಕ್ಷಸಿ ಕೃತ್ಯ ಗುಂಟೂರಿನಲ್ಲಿ ನಡೆದಿದೆ.
ಆಸಿಯಾ ಎಂಬಾಕೆ ಯೆಲ್ಲಮಂಡದ ನರಸಾರೋಪೆಟ್ ಮಂಡಲದಲ್ಲಿ ಸಲಾಂ ಎಂಬುವರನ್ನ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಪತಿ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಅಕ್ಕನ ಮನೆಗೆ ಬಂದಿದ್ದ ಆಸಿಯಾ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಳು. ಮನೆಯಲ್ಲಿ ದೊಡ್ಡವರು ಯಾರೂ ಇಲ್ಲದ ವೇಳೆ ಏಳು ವರ್ಷದ ತನ್ನ ಅಕ್ಕನ ಮಗನ ಹೊಟ್ಟೆ ಬಗೆದು ರಕ್ತ ಕುಡಿದಿದ್ದಾಳೆ. ಅಲ್ಲದೆ ಹೃದಯ ಹೊರ ತೆಗೆದು ವಿಕೃತಿ ಮೆರೆದಿದ್ದಾಳೆ.
ಘಟನೆಗೆ ಸಾಕ್ಷಿಯಾದ ಮೂವರು ಮಕ್ಕಳನ್ನ ಕೂಡಿ ಹಾಕಿ ಆರೋಪಿ ಪರಾರಿಯಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಚಿಲಕಲೂರಿಪೇಟೆ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕೂಡಿ ಹಾಕಿದ್ದ ಮೂವರು ಮಕ್ಕಳನ್ನ ರಕ್ಷಿಸಿದ್ದಾರೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.