ETV Bharat / bharat

ಪರಾಮಾತ್ಮನಿಗೂ ಬಂತೇ ಕೊರೊನಾ ಭೀತಿ: ಶಿವನ ಲಿಂಗಕ್ಕೂ ಮಾಸ್ಕ್​ ಹಾಕಿ ಪೂಜೆ ​ - ಶಿವ ಮಾಸ್ಕ್​​

ಕೊರನಾ ವೈರಸ್​ ಹಿನ್ನೆಲೆ, ಎಲ್ಲೆಡೆ ಮುಂಜಾಗೃತ ಕ್ರಮ ವಹಿಸಲಾಗಿದ್ದು, ಸೋಂಕು ತಗುಲದಂತೆ ಮುಖಗವಸುಗಳನ್ನು ಧರಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಈ ರೋಗದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಸಲುವಾಗಿ ವಾರಣಾಸಿಯ ದೇವಾಲಯವೊಂದರಲ್ಲಿ ಶಿವನ ಲಿಂಗಕ್ಕೂ ಮಾಸ್ಕ್​​ ಹಾಕಲಾಗಿದೆ.

Lord Shiva wears mask
ಶಿವನ ಲಿಂಗಕ್ಕೂ ಮಾಸ್ಕ್​
author img

By

Published : Mar 10, 2020, 1:38 PM IST

Updated : Mar 10, 2020, 1:55 PM IST

ವಾರಣಾಸಿ(ಉತ್ತರ ಪ್ರದೇಶ): ಕೊರೊನಾ ವೈರಸ್​ ಭೀತಿ ಕೇವಲ ಮನುಷ್ಯನಿಗೆ ಮಾತ್ರವಲ್ಲದೇ ಪರಮಾತ್ಮನಾದ ಸದಾಶಿವನಿಗೂ ತಟ್ಟಿದೆಯೇ ಎಂಬ ಪ್ರಶ್ನೆ ವಾರಣಾಸಿಯ ಈ ಈಶ್ವರನ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಕಾಡತೊಡಗಿದೆ.

ಹೌದು, ಕೊರೊನಾ ವೈರಸ್​​ ಹಿನ್ನೆಲೆ, ವಾರಣಾಸಿಯ ಪ್ರಹ್ಲಾದೇಶ್ವರ ದೇವಾಲಯವೊಂದರಲ್ಲಿ ಶಿವನ ಲಿಂಗಕ್ಕೂ ಸಹ ಮುಖಗವಸನ್ನು ಧರಿಸಲಾಗಿದ್ದು, ಶಿವಲಿಂಗವನ್ನು ಸ್ಪರ್ಶಿಸದೇ ನಮಸ್ಕರಿಸುವಂತೆ ಭಕ್ತರಿಗೆ ತಿಳಿಸಿ ಹೇಳಲಾಗುತ್ತಿದೆ.

ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಆನಂದ್​​ ಪಾಂಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜಗತ್ತಿನಾದ್ಯಂತ ಹಬ್ಬಿರುವ ಕೊರೊನಾ ವೈರಸ್​​ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಸ್ವಲ್ಪ ಮಟ್ಟಿನ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಿವಲಿಂಗಕ್ಕೆ ಮುಖಗವಸನ್ನು ಧರಿಸಲಾಗಿದೆ ಎಂದಿದ್ದಾರೆ.

Lord Shiva wears mask
ಶಿವನ ಲಿಂಗಕ್ಕೆ ಮಾಸ್ಕ್​ ಹಾಕಿರುವ ಚಿತ್ರ

ಇನ್ನು ಈ ಬಗ್ಗೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದ ಹಿನ್ನೆಲೆ, ಪ್ರತಿಕ್ರಯಿಸಿದ ಅರ್ಚಕ, ದೇವರಿಗೆ ಪುಷ್ಪ, ವಸ್ತ್ರ, ಗಂಧ ಸೇರಿದಂತೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗುತ್ತದೆ, ಅದೇ ರೀತಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಮುಖಗವಸನ್ನು ಧರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದಲ್ಲದೇ ದೇವಸ್ಥಾನದ ಸುತ್ತ ಮುತ್ತಲೂ ಸಹ ಕೊರೊನಾ ವೈರಸ್​​ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್​ಗಳನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಹಾಕಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಕೊರೊನಾ ವೈರಸ್​ ಸೋಂಕಿನ ಬಗ್ಗೆ ಜಾಗೃತರಾಗಿ, ಖಾಯಿಲೆ ಬಾರದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲಿ ಎಂಬ ಆಶಯ ದೇವಾಲಯದ ಆಡಳಿತ ಮಂಡಳಿಯದ್ದಾಗಿದೆ.

Last Updated : Mar 10, 2020, 1:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.