ETV Bharat / bharat

ಕೊರೊನಾ ಬಾಧಿಸಿದ ವಿಮಾನಯಾನ​ ಸಿಬ್ಬಂದಿಗೆ 10 ದಿನ ಹೋಂ ​ಐಸೋಲೇಷನ್ ಕಡ್ಡಾಯ: ಡಿಜಿಸಿಎ - ಕೊರೊನಾಗೆ ತುತ್ತಾದ ಫ್ಲೈಟ್​ ಸಿಬ್ಬಂದಿಗೆ 10 ದಿನ ಹೋಮ್​ಐಸೋಲೇಷನ್ ಖಡ್ಡಾಯ

ವಿಮಾನಯಾನ ಸಿಬ್ಬಂದಿಯಲ್ಲಿ ಕೋವಿಡ್​-19ನ ಲಕ್ಷಣಗಳಿದ್ದರೆ, ಅವರು 10 ದಿನಗಳ ತನಕ ಹೋಮ್ ​ಐಸೋಲೇಷನ್​ಗೆ ಒಳಗಾಗಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚನೆ ನೀಡಿದೆ.

ಫ್ಲೈಟ್​ ಸಿಬ್ಬಂದಿ
ಫ್ಲೈಟ್​ ಸಿಬ್ಬಂದಿ
author img

By

Published : Dec 20, 2020, 4:41 PM IST

ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾದ ಫ್ಲೈಟ್​ ಸಿಬ್ಬಂದಿ ಕಡ್ಡಾಯವಾಗಿ 10 ದಿನಗಳ ಕಾಲ ಹೋಮ್​ ಐಸೋಲೇಷನ್​​ಗೆ ಒಳಗಾಗಬೇಕು. ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಸೇವೆಗೆ ಹಾಜರಾಗಬಹುದು ಎಂದು ಡೈರೆಕ್ಟರ್‌ ಜನರಲ್ ಆಫ್ ಸಿವಿಲ್ ಏವಿಯೇಷನ್‌ (ಡಿಜಿಸಿಎಂ) ಸೂಚಿಸಿದೆ.

ಕೋವಿಡ್​ನ ಹೆಚ್ಚು ರೋಗಲಕ್ಷಣಗಳನ್ನು ಹೊಂದಿರುವ ಸಿಬ್ಬಂದಿ 14 ದಿನ ಪ್ರತ್ಯೇಕವಾಗಿರಬೇಕಾಗುತ್ತದೆ. ಅಲ್ಲದೇ ಅವರು ಡಿಜಿಸಿಎ ಎಂಪನೇಲ್ಡ್ ಕ್ಲಾಸ್ -1 ಪರೀಕ್ಷಕರಿಂದ ಪರೀಕ್ಷಿಸಬೇಕಾಗುತ್ತದೆ. ಹೀಗೆ ಪರೀಕ್ಷಿಸಿ ಗುಣಮುಖರಾಗಿದ್ದಾರೆ ಎಂದು ಘೋಷಿಸಿದ ನಂತರವೇ ಸಿಬ್ಬಂದಿ ಸೇವೆಗೆ ಮರಳಬಹುದು ಎಂದು ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಓದಿ: ಗುಜರಾತ್​​ನ ಜಮ್​ನಗರ್​ನಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತಿ ದೊಡ್ಡ ಮೃಗಾಲಯ

ಡಿಸೆಂಬರ್ 18 ರಂದು ಹೊರಡಿಸಿರುವ ಈ ಸುತ್ತೋಲೆಯ ಪ್ರಕಾರ, ಕೊರೊನಾದ ಮಧ್ಯಮ ಮತ್ತು ತೀವ್ರ ರೋಗಲಕ್ಷಣ ಹೊಂದಿರುವ ಸಿಬ್ಬಂದಿ, ಸದಸ್ಯರು ವಿಶೇಷ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅವರು ಸಂಪೂರ್ಣವಾಗಿ ಚೇತರಿಕೆ ಕಂಡ ನಂತರ, ನೆಗೆಟಿವ್​ ವರದಿಯೊಂದಿಗೆ ವಿಮಾನಯಾನ ಮಾಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.