ಮಲ್ಕನ್ಗಿರಿ(ಒಡಿಶಾ): ನಕ್ಸಲ್ ಪೀಡಿತ ಮಲ್ಕನ್ಗಿರಿ ಜಿಲ್ಲೆಯ ಹೆಣ್ಣುಮಗಳೊಬ್ಬಳು ವಿಶೇಷ ಸಾಧನೆ ಮಾಡುವ ಮೂಲಕ ಕನಸು ಹೊತ್ತ ಅದೆಷ್ಟೋ ಬಾಲಕಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.
27 ವರ್ಷದ ಅನುಪ್ರಿಯಾ ಲಕ್ರಾ ಮಲ್ಕನ್ಗಿರಿ ಎನ್ನುವ ನಕ್ಸಲ್ ಬಾಧಿತ ಜಿಲ್ಲೆಗೆ ಸೇರಿದವಳು. ಆದರೆ, ಇಂದಿನ ಆಕೆಯ ಸಾಧನೆ ಜಿಲ್ಲೆಗೆ ಅಂಟಿದ ಕಳಂಕವನ್ನು ಕೊಂಚವಾದರೂ ಮರೆಸಿದೆ ಎಂದರೆ ತಪ್ಪಲ್ಲ..!
23 ವಯಸ್ಸಿನ ಲಕ್ರಾ ಇಂಜಿನಿಯರಿಂಗ್ ತೊರೆದು ಏವಿಯೇಷನ್ ಅಕಾಡೆಮಿ ಸೇರುತ್ತಾಳೆ. ನಾಲ್ಕು ವರ್ಷದ ಸತತ ಪರಿಶ್ರಮದ ಬಳಿಕ ಇಂದು ಅನುಪ್ರಿಯಾ ಲಕ್ರಾ ಪೈಲಟ್ ಆಗಿ ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಈ ಮೂಲಕ ಈ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಖಾಸಗಿ ಏರ್ಲೈನ್ನ ಕೋ-ಪೈಲಟ್ ಆಗಿ ಶೀಘ್ರವೇ ನಿಯುಕ್ತಿಗೊಳ್ಳಲಿದ್ದಾರೆ.
-
ମାଲକାନଗିରି ଜିଲ୍ଲାର ଝିଅ ଅନୁପ୍ରିୟା ଲାକ୍ରାଙ୍କ ସଫଳତା ବିଷୟରେ ଜାଣି ମୁଁ ବହୁତ ଖୁସି। ନିଷ୍ଠାପର ଉଦ୍ୟମ ବଳରେ ସେ ହାସଲ କରିଥିବା ସଫଳତା ଅନେକଙ୍କ ପାଇଁ ଉଦାହରଣ। ଜଣେ ଦକ୍ଷ ପାଇଲଟ୍ ଭାବେ ଆଗାମୀ ଦିନରେ ସେ ଆହୁରି ସୁନାମ ଅର୍ଜନ କରନ୍ତୁ। ତାଙ୍କୁ ମୋର ଶୁଭେଚ୍ଛା ଓ ସାଧୁବାଦ।https://t.co/1IIbEwJxHf
— Naveen Patnaik (@Naveen_Odisha) September 8, 2019 " class="align-text-top noRightClick twitterSection" data="
">ମାଲକାନଗିରି ଜିଲ୍ଲାର ଝିଅ ଅନୁପ୍ରିୟା ଲାକ୍ରାଙ୍କ ସଫଳତା ବିଷୟରେ ଜାଣି ମୁଁ ବହୁତ ଖୁସି। ନିଷ୍ଠାପର ଉଦ୍ୟମ ବଳରେ ସେ ହାସଲ କରିଥିବା ସଫଳତା ଅନେକଙ୍କ ପାଇଁ ଉଦାହରଣ। ଜଣେ ଦକ୍ଷ ପାଇଲଟ୍ ଭାବେ ଆଗାମୀ ଦିନରେ ସେ ଆହୁରି ସୁନାମ ଅର୍ଜନ କରନ୍ତୁ। ତାଙ୍କୁ ମୋର ଶୁଭେଚ୍ଛା ଓ ସାଧୁବାଦ।https://t.co/1IIbEwJxHf
— Naveen Patnaik (@Naveen_Odisha) September 8, 2019ମାଲକାନଗିରି ଜିଲ୍ଲାର ଝିଅ ଅନୁପ୍ରିୟା ଲାକ୍ରାଙ୍କ ସଫଳତା ବିଷୟରେ ଜାଣି ମୁଁ ବହୁତ ଖୁସି। ନିଷ୍ଠାପର ଉଦ୍ୟମ ବଳରେ ସେ ହାସଲ କରିଥିବା ସଫଳତା ଅନେକଙ୍କ ପାଇଁ ଉଦାହରଣ। ଜଣେ ଦକ୍ଷ ପାଇଲଟ୍ ଭାବେ ଆଗାମୀ ଦିନରେ ସେ ଆହୁରି ସୁନାମ ଅର୍ଜନ କରନ୍ତୁ। ତାଙ୍କୁ ମୋର ଶୁଭେଚ୍ଛା ଓ ସାଧୁବାଦ।https://t.co/1IIbEwJxHf
— Naveen Patnaik (@Naveen_Odisha) September 8, 2019
ಈಕೆಯ ಸಾಧನೆಗೆ ಸ್ವತಃ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶುಭಾಶಯ ಕೋರಿದ್ದಾರೆ. ಅನುಪ್ರಿಯಾ ಲಕ್ರಾ ಕನಸು ಹೊತ್ತ ಹಲವರಿಗೆ ಸ್ಫೂರ್ತಿಯಾಗಿದ್ದಾಳೆ ಎಂದು ಟ್ವೀಟ್ ಮಾಡಿದ್ದಾರೆ.
ಯಾರು ಈ ಅನುಪ್ರಿಯಾ ಲಕ್ರಾ..?
ಒಡಿಶಾ ಪೊಲೀಸ್ ಇಲಾಖೆಯ ಹವಾಲ್ದಾರ್ ಪುತ್ರಿಯಾಗಿರುವ ಅನುಪ್ರಿಯಾ ಲಕ್ರಾ, ಆಕೆಯ ಸಾಧನೆಯನ್ನು ಹಲವರು ಅನುಮಾನಿಸಿದ್ದರು ಎಂದು ತಾಯಿ ಹೇಳಿದ್ದಾರೆ. ಆದರೆ ಆಕೆಯ ಇಂದಿನ ಸಾಧನೆ ಅನುಮಾನಕ್ಕೆ ತಕ್ಕ ಉತ್ತರ ನೀಡಿದೆ.
ಇಂದಿನ ಆಕೆಯ ಸಾಧನೆಗೆ ಹೆತ್ತವರು ಅತ್ಯಂತ ಸಂತೋಷಗೊಂಡಿದ್ದಾರೆ. ಸಾಧನೆಗೆ ಅಪ್ಪ-ಅಮ್ಮನ ಪ್ರೋತ್ಸಾಹವೇ ಕಾರಣ ಎಂದು ಅನುಪ್ರಿಯಾ ಲಕ್ರಾ ಹೇಳಿದ್ದಾರೆ.