ತಮಿಳುನಾಡು/ಕೇರಳ: ತಿರುವನಂತಪುರಂ ಜಿಲ್ಲೆಯ ತಮಿಳುನಾಡು ಗಡಿ ಸಮೀಪದ ಪರಸ್ಸಲ ನಿಲ್ದಾಣದಲ್ಲಿ ಆಂಬುಲೆನ್ಸ್‌ನಲ್ಲಿ ರೋಗಿಗಳ ಬದಲು ಜನರನ್ನ ಸಾಗಿಸುತ್ತಿದ್ದ ಚಾಲಕನಿಗೆ ಅಧಿಕ ಮೊತ್ತದ ದಂಡ ವಿಧಿಸಿದ್ದು, ಚಾಲಕ ಹಾಗೂ ಐದು ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಕೊಳ್ಳಲಾಗಿದೆ.
ಚಾಲಕ ಆರಂಭದಲ್ಲಿ ಚೆಕ್ ಪೋಸ್ಟ್ಗಳಲ್ಲಿ ಅಧಿಕಾರಿಗಳಿಗೆ ವಾಹನ ಖಾಲಿಯಾಗಿದೆ ಎಂದು ಹೇಳಿದ್ದ. ಆದರೆ ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ ಐದು ಪ್ರಯಾಣಿಕರು ಇರುವುದು ಗೊತ್ತಾಗಿದೆ. ಈತ ಕೇರಳದಿಂದ ತಮಿಳುನಾಡಿಗೆ ಜನರನ್ನ ಕರೆದೊಯ್ಯುತ್ತಿದ್ದ ಎಂದು ತಿಳಿದು ಬಂದಿದ್ದು, ಚಾಲಕ ವಿಜೇಶ್ ಮತ್ತು ಲಾಕ್‌ಡೌನ್ ಪ್ರೋಟೋಕಾಲ್‌ಗಳನ್ನ ಉಲ್ಲಂಘಿಸಿದ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಂಬುಲೆನ್ಸ್‌ನಲ್ಲಿ ಸ್ಥಳೀಯ ರಾಜಕೀಯ ಪಕ್ಷವಾದ ವೈಕುಂತಾ ಸ್ವಾಮಿ ಧರ್ಮ ಪ್ರಚಾರ ಸಭಾದ ಸ್ಟಿಕ್ಕರ್ ಇದೆ. ಆದರೆ, ಪಕ್ಷದ ಅಧಿಕಾರಿಗಳು ಅದು ನಮ್ಮದಲ್ಲ ಎಂದಿದ್ದಾರೆ.
ಇನ್ನು, ಕೇರಳದ ಕೋಜಿಕೋಡೆ ಜಿಲ್ಲೆಯಲ್ಲಿ ಶನಿವಾರ ಎರ್ನಾಕುಲಂನಿಂದ ಕಾಸರಗೋಡಿಗೆ ಜನರನ್ನು ಸಾಗಿಸುತ್ತಿದ್ದ ಮತ್ತೊಂದು ಆಂಬುಲೆನ್ಸ್ ಸಿಕ್ಕಿಬಿದ್ದಿದೆ. ಆಂಬುಲೆನ್ಸ್ ಸುಮಾರು ಐದು ಗಂಟೆಗಳ ಕಾಲ ಪ್ರಯಾಣಿಸಿದ್ದು, ಕೋಜಿಕೋಡೆಯಲ್ಲಿ ಇಬ್ಬರು ಆಂಬುಲೆನ್ಸ್ ಹತ್ತುವುದನ್ನು ಕಂಡ ಕೋಜಿಕೋಡೆ ಪೊಲೀಸರು, ಎಲಥೂರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದಾಗ ಜನರಿವುದು ತಿಳಿದುಬಂದಿದೆ. ಆಂಬುಲೆನ್ಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ ಒಂಭತ್ತು ಮಂದಿ ಇದ್ದರು. ಐದು ಪ್ರಯಾಣಿಕರು ಎರ್ನಾಕುಲಂ ಮತ್ತು ಇಬ್ಬರು ಕೋಜಿಕೋಡೆ ಮೂಲದವರು. ವಿವಿಧ ಕಾಯ್ದೆಗಳಡಿ ಚಾಲಕ ಮತ್ತು ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಾಲಾಗಿದೆ.