ETV Bharat / bharat

ಗುಜರಾತ್‌ನ ಸಿಹೋರ್​ನಲ್ಲಿ ಅಂಬೇಡ್ಕರ್​ ಪ್ರತಿಮೆ ಅಪವಿತ್ರಗೊಳಿಸಿದ ದುಷ್ಕರ್ಮಿಗಳು - ಬಸ್ಟ್​​ನನ್ನು ಬಗೆಟ್​ನಿಂದ ಮುಚ್ಚಿ ಖಾಲಿ ಮದ್ಯದ ಬಾಟಲಿ

ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮನೆ ಹಾನಿಗೊಳಗಾದ ವಾರಗಳ ನಂತರ, ಗುಜರಾತ್‌ನ ಭಾವನಗರದಲ್ಲಿರುವ ಅಂಬೇಡ್ಕರ್​​ ಪ್ರತಿಮೆಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ.

ಅಂಬೇಡ್ಕರ್​ ಪ್ರತಿಮೆ ಅಪವಿತ್ರಗೊಳಿಸಿದ ದುಷ್ಕರ್ಮಿಗಳು

author img

By

Published : Jul 13, 2020, 9:02 PM IST

ಭಾವನಗರ : ಗುಜರಾತ್‌ನ ಭಾವನಗರ ಜಿಲ್ಲೆಯ ಸಿಹೋರ್ ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ಅಪವಿತ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾರೋ ಬಸ್ಟ್​​ನನ್ನು ಬಗೆಟ್​ನಿಂದ ಮುಚ್ಚಿ ಖಾಲಿ ಮದ್ಯದ ಬಾಟಲಿಯನ್ನು ಅದರ ಬಳಿ ಇಟ್ಟಿದ್ದಾರೆ. ಈ ಘಟನೆ ಮಧ್ಯರಾತ್ರಿ ಮತ್ತು ಬೆಳಗ್ಗೆ 8ರ ನಡುವೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲಿನ ಜನರು ಬೆಳಗ್ಗೆ ಸಿಹೋರ್ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ನಂತರ ಐಪಿಸಿ ಸೆಕ್ಷನ್ 295ರ ಅಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜನರು ನಂತರ ಬಸ್ಟ್‌ ಸ್ವಚ್ಛಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.