ನವದೆಹಲಿ: ಮತದಾನೋತ್ತರ ಸಮೀಕ್ಷೆಗಳ ಕುರಿತು ಸಾಕಷ್ಟು ಮೀಮ್ಸ್, ಟ್ರೋಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅವುಗಳ ಪೈಕಿ ನಟಿ ಐಶ್ವರ್ಯ ರೈ ಫೊಟೋ ಬಳಸಿ ಮಾಡಲಾಗಿದ್ದ ಮೀಮ್ನ್ನು ವಿವೇಕ್ ಒಬೆರಾಯ್ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಟ್ವೀಟ್ನಿಂದ ಅಭಿಷೇಕ್ ಬಚ್ಚನ್ ಕೋಪಗೊಂಡಿದ್ದು, ಐಶ್ವರ್ಯ ರೈ ಇದಕ್ಕೆ ಪ್ರತಿಕ್ರಿಯೆ ನೀಡದಂತೆ ಅಭಿಷೇಕ್ಗೆ ಮನವಿ ಮಾಡಿದ್ದರು ಎನ್ನಲಾಗ್ತಿದೆ.
ಈ ಪೋಸ್ಟ್ನಲ್ಲಿ ಮೋಹಕ ತಾರೆ ಐಶ್ವರ್ಯ ರೈ ಮೊದಲಿಗೆ ಸಲ್ಮಾನ್ ಜತೆ, ನಂತರ ವಿವೇಕ್ ಒಬೆರಾಯ್, ಕೊನೆಗೆ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಜತೆ ಇರುವ ಚಿತ್ರಗಳನ್ನು ಮರ್ಜ್ ಮಾಡಿಲಾಗಿದ್ದು, ಈ ಚಿತ್ರಗಳ ಎದುರು ಅನುಕ್ರಮವಾಗಿ Opinion Poll,Exit Poll ಹಾಗೂ Result Poll ಎಂದು ಬರೆಯಲಾಗಿತ್ತು. ಇದರಿಂದ ಇಡೀ ಚಿತ್ರರಂಗ ಮತ್ತು ಅವರ ಅಭಿಮಾನಿಗಳು ಕೋಪಕೊಂಡಿದ್ದರು. ಈ ಸಮಯದಲ್ಲಿ ಐಶ್ವರ್ಯ ರೈ ಮತ್ತು ಆಕೆಯ ಪತಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ಗಾಗಿ ಫ್ರಾನ್ಸ್ನಲ್ಲಿದ್ದರು. ಇದರಿಂದ ಅವರಿಬ್ಬರಿಗೂ ಆಫಾತವಾಗಿ, ಅವರು ಕಾರ್ಯಕ್ರಮದಿಂದ ಹೊರಬರಲು ನಿರ್ಧರಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಷ್ಟೇ ಅಲ್ಲದೆ ಈ ಘಟನೆಯಿಂದ ಅಭಿಷೇಕ್ ಬಚ್ಚನ್ ಕೋಪಿತಗೊಂಡಿದ್ದು, ಪ್ರತಿಕ್ರಿಯೆ ನೀಡಲು ಮುಂದಾದಾಗ ಐಶ್ವರ್ಯ ಅವರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಈ ಎಲ್ಲ ಘಟನೆ ಬಳಿಕ ವಿವೇಕ್ ಒಬೆರಾಯ್ ಟ್ವೀಟ್ನನ್ನು ಡಿಲೀಟ್ ಮಾಡಿದ್ದು, ಕ್ಷಮೆಯಾಚಿಸಿದ್ದಾರೆ.