ETV Bharat / bharat

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: 28 ವರ್ಷಗಳ ಹೆಜ್ಜೆ ಗುರುತು.. - ಬಾಬ್ರಿ ಮಸೀದಿ

28 ವರ್ಷಗಳ ಕಾಲ ದೀರ್ಘ ಕಾಯುವಿಕೆ ಬಳಿಕ, ಐತಿಹಾಸಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ದಿನ ಸಮೀಪಿಸಿದೆ. ಲಖನೌನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್ ಅವರು ಇಂದು ತೀರ್ಪು ಪ್ರಕಟಿಸಲಿದ್ದು, ಇಡೀ ದೇಶದ ಗಮನ ಆ ತೀರ್ಪಿನ ಮೇಲೆ ನೆಟ್ಟಿದೆ.

babri masjid
ಬಾಬ್ರಿ ಮಸೀದಿ
author img

By

Published : Sep 29, 2020, 8:11 PM IST

Updated : Sep 30, 2020, 11:27 AM IST

ಲಖನೌ: 28 ವರ್ಷಗಳ ಬಳಿಕ ಭಾರತದ ಅತ್ಯಂತ ಚರ್ಚಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರ ಬೀಳುತ್ತಿದೆ. ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬರಲಿದೆ. ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್ ಅವರು ಇಂದು ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟಿಸಲಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ 49 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಈ ಪೈಕಿ 17ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ತೀರ್ಪು ಪ್ರಕಟಿಸುವ ಸಂದರ್ಭ ಎಲ್ಲ 32 ಆರೋಪಿಗಳನ್ನು ತೀರ್ಪು ಪ್ರಕಟಿಸುವ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಡಾ.ಮುರಳಿ ಮನೋಹರ್ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಆದರೆ, ತೀರ್ಪು ಪ್ರಕಟಿಸುವ ಸಂದರ್ಭ ನ್ಯಾಯಾಲಯದಲ್ಲಿ ಎಲ್ಲ ಆರೋಪಿಗಳು ಹಾಜರಾಗುವ ಬಗ್ಗೆ ಇನ್ನೂ ಅನುಮಾನವಿದೆ. ಯಾಕೆಂದರೆ, ಆರೋಪಿಗಳ ಪೈಕಿ ಹಲವರು ಇಳಿ ವಯಸ್ಸಿನಲ್ಲಿದ್ದು, ಆರೋಗ್ಯ ಸಮಸ್ಯೆ ಇದೆ. ಇದರ ಜೊತೆಗೆ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದು ಕಷ್ಟಕರ. ಆದರೆ, ಈ ಪ್ರಕರಣದ ಕೆಲ ಪ್ರಮುಖ ಆರೋಪಿಗಳಾದ ಸಾಧ್ವಿ ರಿತಂಭ್ರಾ, ವಿನಯ್ ಕಟಿಯಾರ್ ಮತ್ತು ಪವನ್ ಪಾಂಡೆ ಅವರು ಸ್ವತಃ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಆರೋಪಿಗಳ ಪೈಕಿ ಜೀವಂತವಾಗಿರುವವರು

ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ಮಾ, ಗಾಂಧಿ ಯಾದವ್, ಜೈ ಭನ್ ಸಿಂಗ್, ಲಲ್ಲು ಸಿಂಗ್‌, ಕಮಲೇಶ್‌ ತ್ರಿಪಾಠಿ, ಬ್ರಿಜ್‌ ಭೂಷಣ್ ಸಿಂಗ್, ರಾಮ್‌ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯಲ್, ಅಮರನಾಥ್ ಗೋಯಲ್, ಸಾಧ್ವಿ ರಿತಂಭರ, ಪವನ್ ಪಾಂಡೆ, ವಿಜಯ್‌ ಬಹದ್ದೂರ್‌ ಸಿಂಗ್‌, ಆರ್.ಎಂ. ಶ್ರೀವಾಸ್ತವ, ಧರ್ಮೇಂದ್ರ ಸಿಂಗ್‌ ಗುರ್ಜಾರ್‌, ಓಂಪ್ರಕಾಶ್ ಪಾಂಡೆ ಮತ್ತು ಆಚಾರ್ಯ ಧರ್ಮೇಂದ್ರ.

ಮೃತಪಟ್ಟಿರುವ ಆರೋಪಿಗಳು

ಪರಮಹಂಸ ರಾಮಚಂದ್ರ ದಾಸ್, ವಿನೋದ್ ಕುಮಾರ್ ವಾಟ್ಸ್, ರಾಮ್ ನಾರಾಯಣ್ ದಾಸ್, ಡಿ.ಬಿ.ರೈ, ಲಕ್ಷ್ಮಿ ನಾರಾಯಣ್ ದಾಸ್, ಹರಗೋವಿಂದ್ ಸಿಂಗ್, ರಮೇಶ್ ಪ್ರತಾಪ್ ಸಿಂಗ್, ದೇವೇಂದ್ರ ಬಹದ್ದೂರ್, ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ವಿಷ್ಣುಹಾರಿ ದಾಲ್ಮಿಯಾ, ಮೊರೆಶ್ವರ್ ಸಾವೇ, ಮಹಾಂತ್‌ ಅದ್ವೈತ್ಯನಾಥ್‌ ಮಹಾಮಂಡಲೇಶ್ವರ್‌ ಜಗದೀಶ್‌ ಮುನಿ ಮಹಾರಾಜ್‌, ಸತೀಶ್ ಕುಮಾರ್ ನಗರ್ ಮತ್ತು ಬಾಲಾ ಸಾಹೇಬ್ ಠಾಕ್ರೆ.

ಡಿ.6, 1992ರಂದು ಬಾಬ್ರಿ ಮಸೀದಿ ಧ್ವಂಸ

1992ರ ಡಿಸೆಂಬರ್ 6ರಂದು ನಿಗದಿಯಾಗಿದ್ದ ‘ಕರಸೇವಾ’ ಅಥವಾ ಪವಿತ್ರ ಸೇವೆಯಲ್ಲಿ ಭಾಗವಹಿಸಲು ದೇಶಾದ್ಯಂತ ವಿವಿಧೆಡೆಯಿಂದ ಬರುವ ಎಲ್ಲರಿಗೂ ಹೈಕೋರ್ಟ್ ಅನುಮತಿ ನೀಡಿತ್ತು. ಅಯೋಧ್ಯೆಯನ್ನು ತಲುಪಬಹುದಾದ ‘ಕರಸೇವಕರ’ ಸಂಖ್ಯೆಯನ್ನು ನ್ಯಾಯಾಲಯ ನಿರ್ಧರಿಸಲಿಲ್ಲ. ಕೆಲವು ನಿರ್ಲಜ್ಜ ಮತ್ತು ಸಮಾಜ ವಿರೋಧಿ ಅಂಶಗಳಿಂದಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಈ ಪ್ರಕರಣದ ಮೊದಲ ಎಫ್‌ಐಆರ್ ಅನ್ನು ರಾಮ ಜನಮಭೂಮಿ ಪೊಲೀಸ್ ಠಾಣೆಯಲ್ಲಿ 6.15ಕ್ಕೆ ದಾಖಲಿಸಲಾಗಿದ್ದು, ಇದರಲ್ಲಿ ಲಕ್ಷಾಂತರ ಕರಸೇವಕರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಆದರೆ, ಅವರಲ್ಲಿ ಯಾರೊಬ್ಬರ ಹೆಸರನ್ನೂ ಸರಿಯಾಗಿ ಉಲ್ಲೇಖಿಸಿಲ್ಲ.

ಮೊದಲ ಎಫ್‌ಐಆರ್ ದಾಖಲಿಸಿದ 10 ನಿಮಿಷಗಳ ನಂತರ, ಮತ್ತೊಂದನ್ನು 6.25 ಗಂಟೆಗೆ ನೋಂದಾಯಿಸಲಾಗಿದೆ, ಆಗ ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಉಸ್ತುವಾರಿ ಗಂಗಾ ಪ್ರಸಾದ್ ತಿವಾರಿ ಅವರ ದೂರಿನ ಮೇರೆಗೆ ಈ ಎಫ್‌ಐಆರ್‌ ದಾಖಲಿಸಲಾಗಿತ್ತು. ಎರಡನೇ ಎಫ್‌ಐಆರ್‌ನಲ್ಲಿ ರಾಜಕೀಯದ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಎರಡನೇ ಎಫ್‌ಐಆರ್ ಅನ್ನು ಸ್ಥಳೀಯ ಪೊಲೀಸರಿಗೆ ತನಿಖೆಗಾಗಿ ಹಸ್ತಾಂತರಿಸಲಾಯಿತು. ಆದರೆ, ಪ್ರಕರಣವನ್ನು ಎರಡನೇ ದಿನ ಸಿಬಿ-ಸಿಐಡಿ ತನಿಖೆಗೆ ವರ್ಗಾಯಿಸಲಾಯಿತು. ನಂತರ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಿದರು. ನಂತರ ಉತ್ತರ ಪ್ರದೇಶ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.

ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದ ಸಿಬಿ-ಸಿಐಡಿ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಸಿತ್ತು. ಅದಾದ ನಂತರ, ಇಡೀ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಯಿತು. ತನಿಖೆ ಆರಂಭಿಸಿದ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಜನರ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿತು. ಪ್ರಕರಣದ ವಿಚಾರಣೆ, ವಾದ-ಪ್ರತಿವಾದ ಹೀಗೆ ಸುದೀರ್ಘ ಎರಡು ದಶಕಗಳವರೆಗೆ ನಡೆದಿದೆ. ಈ ಪ್ರಕರಣದ ವಿಚಾರಣೆ ರಾಯ್ ಬರೇಲಿ ಮತ್ತು ಲಖನೌ ಎರಡು ಸ್ಥಳಗಳಲ್ಲಿ ನಡೆಸಲಾಯಿತು.

ಪ್ರಮುಖ ನಾಯಕರನ್ನು ಆರೋಪಿಗಳೆಂದು ಹೆಸರಿಸಲಾದ ಪ್ರಕರಣವನ್ನು ರಾಯ್ ಬರೇಲಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು ಮತ್ತು 2ನೇ ಪ್ರಕರಣವನ್ನು ಲಖನೌದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಇದರಲ್ಲಿ ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಏತನ್ಮಧ್ಯೆ, ಸುಪ್ರೀಂಕೋರ್ಟ್ ಗಣ್ಯರ ಪ್ರಕರಣವನ್ನು ರಾಯ್ ಬರೇಲಿಯಿಂದ ಲಖನೌಗೆ ವರ್ಗಾಯಿಸಿತು. ಅಲ್ಲಿ ಎರಡು ದಶಕಗಳಿಂದ ವಾದ ಪ್ರತಿವಾದಗಳನ್ನು ಆಲಿಸಿದ ನಂತರ ವಿಚಾರಣೆಯನ್ನು ಮುಕ್ತಾಯಗೊಳಿಸಲಾಯಿತು. ಇದೀಗ, ಸೆಪ್ಟೆಂಬರ್ 30, 2020ರಂದು ತೀರ್ಪು ಪ್ರಕಟಿಸಲು ಸಮಯ ನಿಗದಿಪಡಿಸಲಾಗಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕಿರುನೋಟ

  • 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ರಚನೆಯನ್ನು ನೆಲಸಮಗೊಳಿಸಿದ ನಂತರ, ಫೈಜಾಬಾದ್‌ನಲ್ಲಿ ಒಂದೇ ದಿನದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಮೊದಲ ಎಫ್‌ಐಆರ್ ಹೆಸರು ಸೂಚಿಸದ ಲಕ್ಷಾಂತರ ಕರಸೇವಕರ ವಿರುದ್ಧ ದಾಖಲಾಗಿದೆ. ಎರಡನೆಯ ಎಫ್‌ಐಆರ್ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಾಳಾ ಠಾಕ್ರೆ, ಉಮಾ ಭಾರತಿ ಮತ್ತು ಇತರರು ಸೇರಿದಂತೆ 49 ಜನರ ವಿರುದ್ಧ ದಾಖಲಾಗಿದೆ. ಬಾಬ್ರಿ ಮಸೀದಿಯನ್ನು ಕೆಡವಲು ಸಂಚು ಮಾಡಿದ ಗಂಭೀರ ಆರೋಪ ಈ ಎಲ್ಲ ಆರೋಪಿಗಳ ಮೇಲಿದೆ.
  • 1993ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿ ಆದೇಶ ಮಾಡಲಾಯಿತು. ಬಳಿಕ ತನಿಖೆ ನಡೆಸಿದ ಸಿಬಿಐ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಆರೋಪಿಗಳೆಂದು ಹೆಸರಿಸಿದ ಪ್ರಕರಣವನ್ನು ರಾಯ್ ಬರೇಲಿ ನ್ಯಾಯಾಲಯದಲ್ಲಿ ಮತ್ತು ಲಕ್ಷಾಂತರ ಕರಸೇವಕರು ಆರೋಪಿಗಳೆಂದು ಉಲ್ಲೇಖಿಸಲಾಗಿದ್ದ ಇನ್ನೊಂದು ಪ್ರಕರಣವನ್ನು ಲಖನೌ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಅದೇ ವರ್ಷ ಅಕ್ಟೋಬರ್‌ ತಿಂಗಳಲ್ಲಿ, ಸಿಬಿಐ ಎರಡೂ ಪ್ರಕರಣಗಳನ್ನು ವಿಲೀನಗೊಳಿಸಿ ಚಾರ್ಜ್​​ಶೀಟ್ ಅನ್ನು ಸಲ್ಲಿಸಿತು. ಇದರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಇತರ ನಾಯಕರು ಬಾಬ್ರಿ ಮಸೀದಿ ಧ್ವಂಸಕ್ಕೆ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಆರೋಪ ಹೊರಿಸಲಾಗಿತ್ತು.
  • 1996ರಲ್ಲಿ ಉತ್ತರ ಪ್ರದೇಶ ಸರ್ಕಾರ ಎರಡೂ ಪ್ರಕರಣಗಳನ್ನು ಜೊತೆಯಾಗಿ ವಿಚಾರಣೆ ನಡೆಸುವ ಕುರಿತಂತೆ ಅಧಿಸೂಚನೆ ಹೊರಡಿಸಿತು. ಅದರ ನಂತರ, ಲಖನೌದ ಸಿಬಿಐ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿಯ ಪರಿಚ್ಚೇದವನ್ನು ಸೇರಿಸಿತು. ಇದನ್ನು ಆರೋಪಿಗಳಾದ ಲಾಲ್‌ ಕೃಷ್ಣ ಅಡ್ವಾಣಿ ಮತ್ತು ಇತರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
  • ಮೇ 4, 2001ರಂದು ವಿಶೇಷ ಸಿಬಿಐ ನ್ಯಾಯಾಲಯ ಅಡ್ವಾಣಿ ಮತ್ತು ಇತರರ ವಿರುದ್ಧದ ಕ್ರಿಮಿನಲ್ ಪಿತೂರಿಯ ಆರೋಪವನ್ನು ತೆಗೆದುಹಾಕಿತು.
  • 2003ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತು. ಎಲ್.ಕೆ.ಅಡ್ವಾಣಿ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ರಾಯ್ ಬರೇಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ವಿಷಯದಲ್ಲಿ‌, ಹೈಕೋರ್ಟ್‌ ಮಧ್ಯ ಪ್ರವೇಶಿಸಿದ ಬಳಿಕ ಕ್ರಿಮಿನಲ್ ಪಿತೂರಿಯ ಆರೋಪದ ಜೊತೆಗೆ ಅಡ್ವಾಣಿ ಮತ್ತು ಇತರರ ವಿರುದ್ಧದ ವಿಚಾರಣೆ ಮುಂದುವರೆಯಿತು.
  • ಲಾಲ್ ಕೃಷ್ಣ ಅಡ್ವಾಣಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 23ರಂದು ಕೈಬಿಟ್ಟಿತು. ಇದನ್ನು ಪ್ರಶ್ನಿಸಿ 2012ರಲ್ಲಿ ಸಿಬಿಐ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ಬಳಿಕ ಸುಪ್ರೀಂಕೋರ್ಟ್‌ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳ ವಿರುದ್ಧದ ಕ್ರಿಮಿನಲ್ ಪಿತೂರಿಯ ಆರೋಪವನ್ನು ಎತ್ತಿ ಹಿಡಿಯಿತು. ಜೊತೆಗೆ, ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ಸಿಬಿಐಗೆ ಸೂಚನೆ ನೀಡಿತು.
  • ಏಪ್ರಿಲ್ 2017ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಎರಡು ವರ್ಷಗಳಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿತು. ಬಳಿಕ ಈ ಪ್ರಕರಣವನ್ನು ರಾಯ್ ಬರೇಲಿ ಮತ್ತು ಲಖನೌದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ, ಸುಪ್ರೀಂಕೋರ್ಟ್​ ಎರಡೂ ಪ್ರಕರಣಗಳನ್ನು ವಿಲೀನಗೊಳಿಸಲು ಮತ್ತು ಲಖನೌದಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶಿಸಿ ವಿಚಾರಣೆಯನ್ನು ಪೂರ್ಣಗೊಳಿಸಲು ಕಟ್ಟಪ್ಪಣೆ ಮಾಡಿತು.
  • ಹೀಗಾಗಿ, ಮೇ 21, 2017ರಿಂದ, ಪ್ರಕರಣದ ದೈನಂದಿನ ವಿಚಾರಣೆ ಪ್ರಾರಂಭವಾಯಿತು. ಎಲ್ಲ ಆರೋಪಿಗಳ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದಂತೆ ಅನೇಕ ಆರೋಪಿಗಳು ತಮ್ಮ ಹೇಳಿಕೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದಾಖಲಿಸಲಿದ್ದಾರೆ.
  • ಬಳಿಕ ಆಗಸ್ಟ್ 31ರೊಳಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆ ಪೂರ್ಣಗೊಳಿಸಲು ಮೇ 8, 2020ರಂದು ಸುಪ್ರೀಂಕೋರ್ಟ್‌ ಹೊಸ ಆದೇಶಿಸಿತು. ಆದರೆ, ಕೊರೊನಾ ವ್ಯಾಪಕ ಹರಡುವಿಕೆ ದೃಷ್ಟಿಯಿಂದ ವಿಚಾರಣೆಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ಸೆ.30ಕ್ಕೆ ವಿಸ್ತರಿಸಲಾಯಿತು.
  • ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್ ಅವರು ಸೆಪ್ಟೆಂಬರ್ 1, 2020ರಂದು ಎಲ್ಲಾ ಆರೋಪಿಗಳು, ಸಾಕ್ಷಿಗಳು ಮತ್ತು ವಾದ - ಪ್ರತಿವಾದಗಳನ್ನು ಆಲಿಸಿದ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದರು. ಬಳಿಕ, ಸೆಪ್ಟೆಂಬರ್ 2ರಂದು ತೀರ್ಪು ಬರೆಯಲು ಪ್ರಾರಂಭಿಸಿದರು. ಈ ಐತಿಹಾಸಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆ.30ರಂದು ಪ್ರಕಟಿಸಲಾಗುವುದೆಂದು ಸುರೇಂದ್ರ ಯಾದವ್ ಸೆಪ್ಟೆಂಬರ್‌ 16ರಂದು ಪ್ರಕಟಿಸಿದ್ದರು.

Last Updated : Sep 30, 2020, 11:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.