ETV Bharat / bharat

ನೈಸರ್ಗಿಕ ಕಾರಣಗಳಿಂದ 2019ರಲ್ಲಿ 9,261 ಹಸುಗಳ ಸಾವು: ಯುಪಿ ಸರ್ಕಾರ - ಉತ್ತರ ಪ್ರದೇಶ ಹಸು ಸಾವು ಸುದ್ದಿ

ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ, ಮರಣೋತ್ತರ ಪರೀಕ್ಷೆ ಇಲ್ಲದೆ ಸಾವುಗಳು ಸ್ವಾಭಾವಿಕವೆಂದು ಸರ್ಕಾರ ಹೇಗೆ ಖಚಿತಪಡಿಸಿದೆ ಎಂದು ಪ್ರಶ್ನಿಸಿದರು. ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂಬುದನ್ನು ಒಪ್ಪಿಕೊಂಡ ಸಚಿವರು, ಯಾವುದೇ ಅಕ್ರಮದ ವಿಷಯ ತಮ್ಮ ಗಮನಕ್ಕೆ ಬಂದರೆ ಅದನ್ನು ತನಿಖೆ ಮಾಡುತ್ತೇವೆ ಎಂದರು.

cattle-died
9,261 ಹಸುಗಳ ಸಾವು
author img

By

Published : Feb 24, 2020, 7:10 PM IST

ಲಖನೌ : 2019ರಲ್ಲಿ ರಾಜ್ಯದ ವಿವಿಧ ಪಶು ಸಂಗೋಪನಾ ಕೇಂದ್ರಗಳಲ್ಲಿ 9,261 ಹಸುಗಳು ಸಾವನ್ನಪ್ಪಿವೆ. ನೈಸರ್ಗಿಕ ಕಾರಣಗಳಿಂದಾಗಿ ಸಾವು ಸಂಭವಿಸಿರುವುದರಿಂದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಉತ್ತರಪ್ರದೇಶ ಸರ್ಕಾರ ಸೋಮವಾರ ತಿಳಿಸಿದೆ.

ವಿಧಾನಸಭೆಯಲ್ಲಿ ಬಿಎಸ್​ಪಿ ಸದಸ್ಯೆ ಸುಷ್ಮಾ ಪಟೇಲ್ ರಾಜ್ಯ ಪಶು ಸಂಗೋಪನಾ ಕೇಂದ್ರಗಳ್ಲಿ ಸಾವನ್ನಪ್ಪಿದ್ದ ಹಸುಗಳ ವರದಿ ಕೇಳಿದ್ದರಿಂದ ಪಶುಸಂಗೋಪನಾ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ, "2019ರಲ್ಲಿ ರಾಜ್ಯದಲ್ಲಿ 9261 ಜಾನುವಾರುಗಳು ಸಾವನ್ನಪ್ಪಿವೆ. ನೈಸರ್ಗಿಕವಾಗಿ ಸಾವನ್ನಪ್ಪಿರುವುದರಿಂದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಉತ್ತರಿಸಿದ್ದಾರೆ.

ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ, ಮರಣೋತ್ತರ ಪರೀಕ್ಷೆ ಇಲ್ಲದೆ ಸಾವುಗಳು ಸ್ವಾಭಾವಿಕವೆಂದು ಸರ್ಕಾರ ಹೇಗೆ ಖಚಿತಪಡಿಸಿದೆ ಎಂದು ಪ್ರಶ್ನಿಸಿದರು. ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂಬುದನ್ನು ಒಪ್ಪಿಕೊಂಡ ಸಚಿವರು, ಯಾವುದೇ ಅಕ್ರಮದ ವಿಷಯ ತಮ್ಮ ಗಮನಕ್ಕೆ ಬಂದರೆ ಅದನ್ನು ತನಿಖೆ ಮಾಡುತ್ತೇವೆ ಎಂದರು.

ಬಿಜೆಪಿ ಸದಸ್ಯ ಸುರೇಂದ್ರ ಸಿಂಗ್ "ಭಾರತ್ ಮಾತಾ ಕಿ ಜೈ" ಅಥವಾ "ಗೋ ಮಾತಾ ಕಿ ಜೈ" ಎಂದು ಜಪ ಮಾಡುವುದಿಲ್ಲ ಎಂದರು. "ಗೋ ಆಶ್ರಯ ಸ್ಥಳ" ದಲ್ಲಿ ಇರಿಸಲಾಗಿರುವ ಹಸುಗಳನ್ನು ನೋಡಿಕೊಳ್ಳಲ್ಲು ವ್ಯವಸ್ಥೆ ಇರಬೇಕು. ವ್ಯವಸ್ಥೆ ಕೇವಲ ಪದಗಳಿಂದಲ್ಲ ವಾಸ್ತವದಲ್ಲಿಯೂ ಇರಬೇಕು "ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.