ETV Bharat / bharat

90 ವರ್ಷದ ವೃದ್ಧೆ ಮೇಲೆ ರೇಪ್​... ಆರೋಪಿ ಬಂಧಿಸಿದ ಪೊಲೀಸರು! - ರಾಷ್ಟ್ರ ರಾಜಧಾನಿ ದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದ್ದು, 90 ವರ್ಷದ ವೃದ್ಧೆ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ್ದಾನೆ.

Swati Maliwal
Swati Maliwal
author img

By

Published : Sep 8, 2020, 8:03 PM IST

ನವದೆಹಲಿ: 90 ವರ್ಷದ ವೃದ್ಧೆ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದ್ದು, ಇದೀಗ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಜೆ 5 ಗಂಟೆ ವೇಳೆ ಮನೆ ಹೊರಗೆ ಹಾಲುಗಾರನಿಗೋಸ್ಕರ ಕಾಯುತ್ತಿದ್ದ ವೇಳೆ, ಅಲ್ಲಿಗೆ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಜತೆಗೆ ವೃದ್ಧೆಯನ್ನ ಹಾಲು ಮಾರುವ ವ್ಯಕ್ತಿ ಹತ್ತಿರ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆತನ ನಂಬಿರುವ ವೃದ್ಧೆ ಆತನೊಂದಿಗೆ ತೆರಳಿದ್ದಾಳೆ. ಈ ವೇಳೆ ರೆವ್ಲಾ ಖಾನ್ಪುರ್​​ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಸುತ್ತಿದ್ದ ವೇಳೆ ಆಕೆ ಕಿರುಚಿಕೊಂಡಿದ್ದಾಳೆ. ತಕ್ಷಣ ಕೆಲವರು ಅಲ್ಲಿಗೆ ಬಂದು ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಸಂತ್ರಸ್ತೆಯನ್ನ ಆಕೆಯ ಮಗ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಇದೀಗ ಆರೋಪಿ ವಿರುದ್ಧ ಸೆಕ್ಷನ್​​ 376/323 ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ. ಆರೋಪಿಯನ್ನ 33 ವರ್ಷದ ಸೋನು ಎಂದು ಗುರುತಿಸಲಾಗಿದೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್​​ ಸಂತ್ರಸ್ತೆ ಭೇಟಿ ಮಾಡಿ, ಎಲ್ಲ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ದೆಹಲಿ 6 ತಿಂಗಳ ಬಾಲಕಿಯಿಂದ ಹಿಡಿದು, 90 ವರ್ಷದ ವೃದ್ಧ ಮಹಿಳೆಯರಿಗಾಗಲೀ ಸುರಕ್ಷಿತವಾಗಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.