ಪೂಂಚ್(ಜಮ್ಮು ಮತ್ತು ಕಾಶ್ಮೀರ): ಪಾಕ್ ಗುಂಡಿನ ದಾಳಿಗೆ ದಿಟ್ಟ ಪ್ರತೀಕಾರ ತೋರಿದ ಭಾರತ ಸೇನೆ, ಮೂವರು ಉಗ್ರರನ್ನು ಹೊಡೆದುರುಳಿಸುವ ಮೂಲಕ ತಕ್ಕ ಎದಿರೇಟು ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ಭಾಗದ ಮೆಂಧಾರ್ ಪ್ರದೇಶದಲ್ಲಿ ಪಾಕ್ ಸೇನೆ ಕಳೆದ ಕೆಲವು ದಿನಗಳಿಂದ ಕದನ ವಿರಾಮ ಉಲ್ಲಂಘಿಸುತ್ತಿದೆ. ಹೀಗಾಗಿ ಪ್ರತಿದಾಳಿ ನಡೆಸಿದ ಭಾರತ ಸೇನೆ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಗುಪ್ತಚರ ಮಾಹಿತಿ ಪ್ರಕಾರ ಭಾರತೀಯ ಸೇನೆ ಮೂವರು ಪಾಕ್ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ.
ಕಳೆದ ಭಾನುವಾರ ಬಾಲಾಕೋಟ್ ಹಾಗೂ ಮೆಂಧಾರ್ ಪ್ರದೇಶದಲ್ಲೂ ಪಾಕ್ ಕದನ ವಿರಾಮ ಉಲ್ಲಂಘಿಸಿತ್ತು.