ನವದೆಹಲಿ: ಕಳೆದ 2014 ರಿಂದ 18ರ ನಡುವೆ ದೇಶದ್ರೋಹ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿಯಲ್ಲಿ 233 ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದರು. ಅದರಲ್ಲಿ ಅಸ್ಸೋಂ ಮತ್ತು ಜಾರ್ಖಂಡ್‌ನಲ್ಲಿ ತಲಾ 37 ಪ್ರಕರಣಗಳು ನಡೆದಿವೆ. ಇವು ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ ಐಪಿಸಿ ಸೆಕ್ಷನ್ 124A ಅಡಿಯಲ್ಲಿ (ದೇಶದ್ರೋಹ) ಈ ಪ್ರಕರಣಗಳು ದಾಖಲಾಗಿವೆ.
ವರ್ಷ | ಪ್ರಕರಣಗಳು |
2014 | 47 |
2015 | 30 |
2016 | 35 |
2017 | 51 |
2018 | 70 |
ಲಿಖಿತ ಪ್ರಶ್ನಾವಳಿ ಸಂದರ್ಭದಲ್ಲಿ 2014 ಮತ್ತು 2018ರ ನಡುವೆ ಅಸ್ಸೋಂ ಮತ್ತು ಜಾರ್ಖಂಡ್‌ನಲ್ಲಿ ತಲಾ 37 ಜನರಿಗೆ, ಹರಿಯಾಣದಲ್ಲಿ 29 ಮಂದಿಗೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಇವು ಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.