ETV Bharat / bharat

ಪಬ್​ಜಿ ಗೆಳೆಯನೊಂದಿಗೆ ಓಡಿ ಹೋದ ಗೆಳತಿ... ಪೊಲೀಸರ ಸಮ್ಮುಖದಲ್ಲೇ ಮದುವೆ​!

20 ವರ್ಷದ ಯುವತಿ ಬಬಿಶಾ ತಮ್ಮ ಮನೆಯಿಂದ ಓಡಿ ಹೋಗಿ ಪಬ್​ ಜೀ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

20 year old girl eloped from house
20 year old girl eloped from house
author img

By

Published : Sep 24, 2020, 6:59 PM IST

ಕನ್ಯಾಕುಮಾರಿ(ತಮಿಳುನಾಡು): ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದ ಜೋಡಿ ಕುಟುಂಬಸ್ಥರ ವಿರೋಧಕ್ಕೆ ಹೆದರಿ ಮನೆಯಿಂದ ಓಡಿ ಹೋಗಿ ಮದುವೆ ಮಾಡಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಪಬ್​​ಜಿ ಜೋಡಿ ಪರಸ್ಪರ ಮದುವೆ ಮಾಡಿಕೊಂಡಿದ್ದಾರೆ.

ಪಬ್​ಜೀ ಗೆಳೆಯನೊಂದಿಗೆ ಓಡಿ ಹೋದ ಗೆಳತಿ

20 ವರ್ಷದ ಯುವತಿ ಬಬಿಶಾ ತಮ್ಮ ಮನೆಯಿಂದ ಓಡಿ ಹೋಗಿ ಪಬ್​ಜಿ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್​​ನಿಂದ ಲಾಕ್​ಡೌನ್​ ಹೇರಲಾಗಿದ್ದ ಸಂದರ್ಭದಲ್ಲಿ 20 ವರ್ಷದ ಯುವತಿ ಬಬಿಶಾ 24 ವರ್ಷದ ಅಜಿನ್​ ಪ್ರಿನ್ಸ್​ ಪಬ್​ಜಿ ಆಡುತ್ತಾ ಪರಿಚಯವಾಗಿದ್ದಾರೆ.

ಬಬಿಶಾ ಕನ್ಯಾಕುಮಾರಿಯವಳಾಗಿದ್ದು, ಅಜಿನ್​ ಪ್ರಿನ್ಸ್​​​ ತಿರುವರೂರು ಜಿಲ್ಲೆಯವನಾಗಿದ್ದನು. ಆರಂಭದಲ್ಲಿ ಕೇವಲ ಪಬ್​ಜಿ ಗೇಮ್​ಗೆ ಸಿಮೀತವಾಗಿದ್ದ ಇವರ ಸ್ನೇಹ ತದನಂತರ ಪ್ರೀತಿಯಾಗಿ ಬದಲಾಗಿದೆ. ಹೀಗಾಗಿ ಸೆಪ್ಟೆಂಬರ್​​ 19ರಂದು ಬಬಿಶಾ- ಅಜಿನ್​​ ಮನೆಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಾರೆ. ಇದೀಗ ಬಬಿಶಾ ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇನ್ನು ಮದುವೆ ಮಾಡಿಕೊಂಡಿರುವ ಜೋಡಿ ಈಗಾಗಲೇ ಪೊಲೀಸ್​ ಠಾಣೆಗೆ ಶರಣಾಗಿದ್ದಾರೆ. ಬಬಿಶಾ ತಿಳಿಸಿರುವ ಪ್ರಕಾರ ತಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಲು ಪೋಷಕರು ಹಿಂಜರಿಯುತ್ತಿರುವ ಕಾರಣ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಇನ್ನು ಪೊಲೀಸರ ಉಪಸ್ಥಿತಿಯಲ್ಲೇ ಹತ್ತಿರದ ದೇವಾಲಯದ ಮುಂದೆ ಮದುವೆ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.