ETV Bharat / bharat

ರೂಪಾಂತರ ಕೊರೊನಾ ಅಬ್ಬರ : 20 ಮಂದಿಗೆ ತಗುಲಿದ ಪರಿವರ್ತಿತ ಸೋಂಕು

ಈಗಾಗಲೇ ಕೊರೊನಾ ಪರೀಕ್ಷೆ ನಡೆಸಲು 10 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಬ್ರಿಟನ್​ನಿಂದ ಬಂದವರು ಮಾತ್ರವಲ್ಲದೆ, ಶೇ.25ರಷ್ಟು ಇತರ ಮಂದಿಯನ್ನೂ ಪರೀಕ್ಷೆ ಮಾಡಲಾಗುತ್ತಿದೆ..

20 ಮಂದಿಗೆ ತಗುಲಿದ ಹೊಸ ಸೋಂಕು
20 ಮಂದಿಗೆ ತಗುಲಿದ ಹೊಸ ಸೋಂಕು
author img

By

Published : Dec 30, 2020, 9:03 AM IST

ಹೈದರಾಬಾದ್ ​: ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 20 ಜನರಿಗೆ ರೂಪಾಂತರ ಕೊರೊನಾ ವೈರಸ್​ ಸೋಂಕು ತಗುಲಿದೆ.

ದೆಹಲಿಯ ಎನ್​ಸಿಡಿಸಿಯಲ್ಲಿ 8 ಮಂದಿ, ಬೆಂಗಳೂರಿನ ನಿಮ್ಹಾನ್ಸ್‌ನಿಂದ 7 ಮಂದಿ, ಹೈದರಾಬಾದ್‌ನ ಸಿಸಿಎಂಬಿಯಿಂದ 2, ಕೋಲ್ಕತಾ ಬಳಿಯ ಎನ್‌ಐಬಿಜಿ ಕಲ್ಯಾಣಿ, ಪುಣೆಯ ಎನ್‌ಐವಿಯಿಂದ ಮತ್ತು ದೆಹಲಿಯ ಐಜಿಐಬಿಯಿಂದ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಈಗಾಗಲೇ ಕೊರೊನಾ ಪರೀಕ್ಷೆ ನಡೆಸಲು 10 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಬ್ರಿಟನ್​ನಿಂದ ಬಂದವರು ಮಾತ್ರವಲ್ಲದೆ, ಶೇ.25ರಷ್ಟು ಇತರ ಮಂದಿಯನ್ನೂ ಪರೀಕ್ಷೆ ಮಾಡಲಾಗುತ್ತಿದೆ.

ಸದ್ಯ ಮಂಗಳವಾರದಂದು ಆರು ಮಂದಿಯಲ್ಲಿ ರೂಪಾಂತರ ಕೊರೊನಾ ವೈರಸ್​ ಪತ್ತೆಯಾಗಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ 28 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ನವೆಂಬರ್​ 25ರಿಂದ ಡಿಸೆಂಬರ್​ 23ರ ನಡುವೆ ಭಾರತಕ್ಕೆ ಸುಮಾರು 33 ಸಾವಿರ ಮಂದಿ ಆಗಮಿಸಿದ್ದರು. ಅವರೆಲ್ಲರನ್ನೂ ಪತ್ತೆ ಹಚ್ಚಿ ಕೊರೊನಾ ಪರೀಕ್ಷೆ ನಡೆಸುವ ಕಾರ್ಯ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.